ಅಮೂಲ್ಯ ಮನೆಯಲ್ಲಿ ಅರಿಶಿನ ಶಾಸ್ತ್ರ ಮುಕ್ತಾಯ, ಆದಿಚುಂಚನಗಿರಿಗೆ ಹೊರಟ ಅಮ್ಮು-ಜಗ್ಗಿ ಕುಟುಂಬ

ಬೆಂಗಳೂರು: ನಟಿ ಅಮೂಲ್ಯ ಮದುವೆಗೆ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಈಗಾಗಲೇ ಅರಿಶಿನ ಶಾಸ್ತ್ರ ಮುಗಿದಿದ್ದು, ಅಮೂಲ್ಯ ತಮ್ಮ ಬಂಧು-ಬಳಗದವರಿಂದ ಆಶೀರ್ವಾದ ಪಡೆದಿದ್ದಾರೆ. ಇದೀಗ ಶೇಷಾದ್ರಿಪುರಂ ನಿವಾಸದಿಂದ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಕ್ಷೇತ್ರಕ್ಕೆ ಅಮೂಲ್ಯ ಕುಟುಂಬ ತೆರಳಿದೆ.

ಕಲ್ಯಾಣೋತ್ಸವದ ಹಿನ್ನೆಲೆಯಲ್ಲಿ ವರ ಜಗದೀಶ್ ಮನೆಯಲ್ಲೂ ಒಕ್ಕಲಿಗ ಸಂಪ್ರದಾಯದಂತೆ ಸಾಂಪ್ರದಾಯಿಕ ಶಾಸ್ತ್ರಗಳು ನಡೆಯುತ್ತಿದೆ. ಮನೆ ದೇವರ ಮುಂದೆ ಮದುವೆಯ ವಸ್ತ್ರಾಭರಣವಿಟ್ಟು ಪೂಜೆ ಮಾಡಿದ್ರು. ಚಿನ್ನದ ಡಾಬು, ಮಾಂಗಲ್ಯ, ವಂಕಿ, ಓಲೆ ಜುಮುಕಿ, ತಾಳಿಸರ, ಬಂಗಾರದ ಬಳೆಗಳಿಗೆ ಪೂಜೆ ಮಾಡಲಾಗಿದೆ.ಪೂಜೆಗಿಟ್ಟ ಒಡವೆಗಳನ್ನು ಜಗದೀಶ್ ತಂದೆ ರಾಮಚಂದ್ರ ಅಮೂಲ್ಯಗೆ ಕೊಡಲಿದ್ದಾರೆ.

ವರ ಜಗದೀಶ್ ಎಲ್ಲಾ ಶಾಸ್ತ್ರಗಳನ್ನ ಮುಗಿಸಿದ್ದು, ಇದೀಗ ಜಗದೀಶ್ ಕುಟುಂಬ ಕೂಡ ಆರ್‍ಆರ್ ನಗರದ ನಿವಾಸದಿಂದ ಆದಿ ಚುಂಚನಗಿರಿಗೆ ತೆರಳಿದೆ. ಆಡಿ, ಬಿಎಂಡಬ್ಲ್ಯೂ ಸೇರಿದಂತೆ ದುಬಾರಿ ಕಾರುಗಳಲ್ಲಿ ವರನ ಕಡೆಯವರು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *