ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!

ಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal) ಮಗಳು ವಿಸ್ಮಯಾ ಮೋಹನ್‌ಲಾಲ್ (Vismaya Mohanlal) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೋಹನ್‌ಲಾಲ್ ಪುತ್ರ ಪ್ರಣವ್ ಈಗಾಗ್ಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಪುತ್ರಿ ಚಿತ್ರರಂಗದಲ್ಲಿ ನಾಯಕಿಯಾಗಿ ಲಾಂಚ್ ಆಗುತ್ತಿದ್ದಾರೆ. ಈ ಖುಷಿ ವಿಚಾರವನ್ನ ಮೋಹನ್‌ಲಾಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಶೀರ್ವಾದ್ ಸಿನಿಮಾಸ್ ಬ್ಯಾನರ್‌ನಲ್ಲಿ ಜ್ಯೂಡ್ ಆ್ಯಂಟನಿ ಜೊಸೆಫ್ ನಿರ್ದೇಶನದ ಸಿನಿಮಾದ ಮೂಲಕ ಮೋಹನ್‌ಲಾಲ್ ಪುತ್ರಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡ್ತಿದ್ದಾರೆ. ಈ ಮೊದಲು ಸಹಾಯಕ ನಿರ್ದೇಶಕಿಯಾಗಿ ಕೂಡಾ ಕಾರ್ಯ ನಿರ್ವಹಿಸಿರುವ ವಿಸ್ಮಯ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅಲ್ಲದೇ ಸಿನಿಮಾಗಾಗಿ 22 ಕೆಜಿ ತೂಕ ಇಳಿಸಿದ್ದಾರಂತೆ. ಇದನ್ನೂ ಓದಿ: `ರಾಮ್‌ಚರಣ್‌ಗೆ ಚಿತ್ರ ಮಾಡಿ ಕೆಟ್ಟೆ’ ಎಂದ ಪ್ರೊಡ್ಯೂಸರ್

ಮೋಹನ್‌ಲಾಲ್ ಪುತ್ರಿ ಈ ಚಿತ್ರಕ್ಕಾಗಿ ಹಾಗೂ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವುದಕ್ಕಾಗಿ ತೂಕ ಇಳಿಸುವುದರ ಜೊತೆಗೆ ಪೂರಕವಾದ ತರಬೇತಿಯನ್ನ ಥಾಯ್ಲೆಂಡ್‌ನಲ್ಲಿ ಪಡೆದಿದ್ದಾರೆ ಎನ್ನಲಾಗ್ತಿದೆ. ಇನ್ನು ಮೋಹನ್‌ಲಾಲ್ ಪುತ್ರ ಮೊದಲ ಸಿನಿಮಾದಲ್ಲೇ ಜನಮನ ಸೆಳೆದಿದ್ದರು. ಇದೀಗ ಪುತ್ರಿ ಕೂಡಾ ಚಿತ್ರರಂಗದಲ್ಲಿ ಯಶಸ್ವಿಯಾಗಲಿ ಅಂತಾ ಮೋಹನ್‌ಲಾಲ್ ಅಭಿಮಾನಿ ವರ್ಗ ಹಾರೈಸುತ್ತಿದೆ. ಇದನ್ನೂ ಓದಿ: ಪಿ.ಸಿ ಶೇಖರ್ ನಿರ್ದೇಶನ ಮಹಾನ್ ಚಿತ್ರದಲ್ಲಿ ಮಿತ್ರ ವಿಶೇಷ ಪಾತ್ರ