ಅಕ್ಕಿ, ಮೊಟ್ಟೆ ಆಯ್ತು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪ್ಲಾಸ್ಟಿಕ್ ಕ್ಯಾಬೇಜ್ – ವಿಡಿಯೋ ನೋಡಿ

ನವದೆಹಲಿ: ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಸಕ್ಕರೆಯಂತೆಯೇ ಇದೀಗ ಪ್ಲಾಸ್ಟಿಕ್ ಕ್ಯಾಬೇಜ್ ಕೂಡ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಹೌದು, ದೆಹಲಿಯ ರುಚಿ ಟಂಡನ್ ಮಂಡ್ರೆ ಎಂಬ ಮಹಿಳೆಯೊಬ್ಬರು ಮಾರುಕಟ್ಟೆಯಿಂದ ಕ್ಯಾಬೇಜ್ ತಂದಿದ್ದರು. ಮಾರುಕಟ್ಟೆಯಿಂದ ತಂದ ಕ್ಯಾಬೇಜನ್ನು ಹೆಚ್ಚಲು ಹೋದಾಗ ಬೆಳಕಿಗೆ ಬಂದಿದೆ. ಬಳಿಕ ಮಹಿಳೆ ಅದನ್ನು ಪರೀಕ್ಷೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಅದು ಪ್ಲಾಸ್ಟಿಕ್ ಕ್ಯಾಬೇಜ್ ಎಂಬುವುದು ಪಕ್ಕಾ ಆಗಿದೆ. ಮಹಿಳೆ ನಡೆಸಿದ ಕ್ಯಾಬೇಜ್ ಪರೀಕ್ಷೆ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆಗೆ ತಂದಿದ್ದ ಕ್ಯಾಬೇಜನ್ನು ಮಹಿಳೆಯ ಸೊಸೆ ಕತ್ತರಿಸಿದಾಗ, ಅದು ನೈಸರ್ಗಿಕವಾಗಿ ಸುಲಭವಾಗಿ ಕತ್ತರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪರೀಕ್ಷೆ ಮಾಡುವ ಸಲುವಾಗಿ ಎಲೆಯನ್ನು ಗ್ಯಾಸ್ ಸ್ಟೌವ್ ನಲ್ಲಿ ಬೆಂಕಿಗೆ ಹಿಡಿದಾಗ, ಹಲವು ಸೆಕೆಂಡ್ ಗಳ ಬಳಿಕವೂ ಯಾವುದೇ ವ್ಯತ್ಯಾಸ ಕಾಣದೇ ಹಾಗೆಯೇ ಉಳಿದುಕೊಂಡಿತ್ತು. ಇದರಿಂದ ಮಹಿಳೆ ಗಾಬರಿಯಾಗಿದ್ದು, ಆ ಮೂಲಕ ಇದು ಪ್ಲಾಸ್ಟಿಕ್ ಕ್ಯಾಬೇಜ್ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: ಪ್ರತಿದಿನ ಮೊಟ್ಟೆ ತಿಂತೀರಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

ಮನೆಯ ಬಳಿಯೇ ಇದ್ದ ಖ್ಯಾತ ತರಕಾರಿ ಮಳಿಗೆಯೊಂದರಿಂದ ಈ ಕೋಸು ಖರೀದಿಸಿದ್ದರು. ಹೀಗಾಗಿ ಸೂಪರ್ ಮಾರ್ಕೆಟ್ ಅಥವಾ ತರಕಾರಿ ಅಂಗಡಿಯಿಂದ ಕ್ಯಾಬೇಜ್ ಖರೀದಿ ಮಾಡುವಾಗ ಜಾಗರೂಕರಾಗಿರಿ.

https://www.facebook.com/ruchiarch/videos/vb.646671225/10154980023831226/?type=2&theater

Comments

Leave a Reply

Your email address will not be published. Required fields are marked *