ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

ನವದೆಹಲಿ: ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ಸೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು 140 ಕೋಟಿ ಭಾರತೀಯರೂ (Indians) ಕೊಂಡಾಡಿದ್ದಾರೆ.

ಬುಧವಾರ (ಜೂ.25) ಮಧ್ಯಾಹ್ನ 12:03ರ ವೇಳೆಗೆ ಆಕ್ಸಿಯಂ-4 ಮಿಷನ್‌ ಅಡಿಯಲ್ಲಿ (NASA Axiom 4 Mission) ಉಡಾವಣೆ ಆಗಿದ್ದ ಸ್ಪೇಸ್‌ಎಕ್ಸ್‌ನ ʻಡ್ರ್ಯಾಗನ್‌ʼ ನೌಕೆ ಗುರುವಾರ (ಜೂ.26) ಸಂಜೆ 4:01 ಗಂಟೆ ವೇಳೆಗೆ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್‌ (ಕೂಡಿಸುವುದು) ಆಯಿತು. ಇದಾದ 2 ಗಂಟೆಗಳ ನಂತರ ಹ್ಯಾಚ್‌ ತೆರೆಯಿರು. ಬಳಿ ಶುಕ್ಲಾ (Shubhanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನೊಳಗೆ ಅಧಿಕೃತವಾಗಿ ಪ್ರವೇಶಿಸುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದರು. ಐಎಸ್‌ಎಸ್‌ ಪ್ರವೇಶಿಸುತ್ತಿದ್ದಂತೆ ನಿಲ್ದಾಣದ ಸಿಬ್ಬಂದಿ ಪರಸ್ಪರ ಅಪ್ಪಿಕೊಂಡು ಬರಮಾಡಿಕೊಂಡರು. ಇದನ್ನೂ ಓದಿ: ಡಾಕಿಂಗ್‌ ನಂತರದ ಪ್ರಕ್ರಿಯೆ ಶುರು – ಸಂಜೆ 6 ಗಂಟೆ ವೇಳೆಗೆ ಬಾಹ್ಯಾಕಾಶ ನಿಲ್ದಾಣದೊಳಕ್ಕೆ ಅಧಿಕೃತ ಎಂಟ್ರಿ

ಹೇಗಿತ್ತು ಹ್ಯಾಚ್ ತೆರೆಯುವ ಪ್ರಕ್ರಿಯೆ?
* ಸಾಫ್ಟ್ ಕ್ಯಾಪ್ಚರ್ (ಡಾಕಿಂಗ್ ಪೂರ್ಣ) – ಮೊದಲಿಗೆ ಡಾಕಿಂಗ್‌ ಪೂರ್ಣಗೊಂಡ ನಂತರ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಸಂಪರ್ಕಗೊಂಡಿತು.
* ಹಾರ್ಡ್ ಮೇಟ್ (ಮೆಕ್ಯಾನಿಕಲ್ ಲಾಚಿಂಗ್) – ಅಂದ್ರೆ ಐಎಸ್‌ಎಸ್‌ ಮತ್ತು ನೌಕೆಯ ನಡುವೆ ಸೀಲ್ ಭದ್ರಪಡಿಸಿಕೊಳ್ಳಲು ಲಾಚ್‌ಗಳು ಮತ್ತು ಹುಕ್ಸ್‌ ಜೋಡಿಸಲಾಯಿತು. ಬಳಿಕ ನೌಕೆಯಲ್ಲಿ ಯಾವುದೇ ರೀತಿಯ ಸೋರಿಕೆಯಾಗುತ್ತಿದೆಯೇ ಅನ್ನೋದನ್ನ ಪರಿಶೀಲಿಸಿಕೊಳ್ಳಲಾಯಿತು.
* ಸುರಕ್ಷಿತ ವಾತಾವರಣ ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವಿನ ಒತ್ತಡವನ್ನು ಸಮೀಕರಿಸಲಾಯಿತು.
* ಸೂಟ್ ಡಾಫಿಂಗ್ ಮತ್ತು ಸಿಸ್ಟಮ್: ಬಳಿಕ ಗಗನಯಾತ್ರಿಗಳು ತಮ್ಮ ಹೆಲ್ಮೆಟ್‌, ಸೂಟ್‌ಗಳನ್ನು ತೆಗೆದುಹಾಕಿ ಎಲ್ಲ ವ್ಯವಸ್ಥೆಗಳು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
* ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಚ್‌ ತೆರೆದುಕೊಳ್ಳುತ್ತಿದ್ದಂಎತ ಗಗನಯಾತ್ರಿಗಳು ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದರು. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಬಾಹ್ಯಾಕಾಶವನ್ನು ತಲುಪಿದ 2ನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ಇದಾದ 4 ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ 2ನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ. ಆದ್ರೆ ಬಾಹ್ಯಾಕಾಶ ನಿಲ್ದಾಣದೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಶುಕ್ಲಾ ಅವರೇ ಆಗಿದ್ದಾರೆ.

ಗಮನಿಸಬೇಕಾದ ಮುಖ್ಯಾಂಶಗಳು
ನಾಲ್ವರು ಗಗನಯಾನಿಗಳು 14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಗಗನಯಾನಿಗಳು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ನಡೆಸಲಿದ್ದಾರೆ. ಶುಕ್ಲಾ ಅವರು ಐಎಸ್‌ಎಸ್‌ನಲ್ಲಿ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲಿದ್ದಾರೆ. ಇಸ್ರೋ ಹಾಗೂ ಬಯೊಟೆಕ್ನಾಲಜಿ ಇಲಾಖೆ ಇದಕ್ಕೆ ಸಹಯೋಗ ನೀಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌