ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

ರ್ನಾಟಕದಲ್ಲಿ ಬ್ಯಾನ್‌ಗೆ ಒಳಗಾದ ಕಮಲ್ ಹಾಸನ್ ಅಭಿನಯದ `ಥಗ್‌ಲೈಫ್’ (Thug Life) ಚಿತ್ರ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎಳೆಸಿಕೊಳ್ಳುವ ಸ್ಥಿತಿಗೆ ಬಂದಿದೆ ಸಿನಿಮಾ ತಂಡ. ಮೊದಲೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಕಾರಣಕ್ಕೆ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಸೋತಿದೆ. ಈ ನಡುವೆ ಮಾತಿಗೆ ತಪ್ಪಿರುವುದರಿಂದ 25 ಲಕ್ಷ ರೂ. ದಂಡ ಅನುಭವಿಸುವಂತಾಗಿದೆ. ಕಾರಣ ಮಲ್ಟಿಪ್ಲೆಕ್ಸ್ಗಾಗಿ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನಿಂದ ಭಾರಿ ದಂಡವನ್ನು ಎದುರಿಸುತ್ತಿದ್ದಾರೆ ಥಗ್‌ಲೈಫ್ ನಿರ್ಮಾಪಕರು.

ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟು ಕ್ಷಮೆ ಕೇಳದೇ ಮೊಂಡುತನ ಮೆರೆದಿದ್ದ ಕಮಲ್ ಥಗ್‌ಲೈಫ್ ಚಿತ್ರ ಕರ್ನಾಟಕಕ್ಕೆ ಎಂಟ್ರಿ ಕೊಡಲೇ ಇಲ್ಲ. ಕೋರ್ಟ್‌ನಿಂದ ಕಮಲ್ ಅನುಮತಿ ಪಡೆದಿದ್ದರೂ ವಿತರಕರು ಮುಂದೆ ಬರದ ಕಾರಣಕ್ಕೆ ಕರ್ನಾಟಕದಲ್ಲಿ ತೆರೆ ಕಾಣಲಿಲ್ಲ. ಈ ನಡುವೆ ಭಾರೀ ಬಜೆಟ್‌ನಲ್ಲಿ ನಿರ್ಮಾಣವಾದ ಥಗ್‌ಲೈಫ್ ಹೀನಾಯವಾಗಿ ಸೋತಿದೆ ಎನ್ನಲಾಗಿದ್ದು, ಏಟಿನ ಮೇಲೆ ಏಟು ಎನ್ನುವಂತೆ ದಂಡ ಕಟ್ಟುವ ಸ್ಥಿತಿಗೆ ಬಂದಿದೆ.ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

ರಿಲೀಸ್‌ಗೂ ಮುನ್ನ ಭಾರೀ ಪ್ರಚಾರದ ಹೊರತಾಗಿಯೂ ಥಗ್‌ಲೈಫ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರಾಶಾದಾಯಕ ಗಳಿಕೆಯನ್ನು ಕಂಡಿತ್ತು. ದೊಡ್ಡ ಸ್ಟಾರ್‌ಗಳನ್ನೊಳಗೊಂಡ ಟೀಮ್ ಇದ್ರೂ ಉತ್ತಮ ಪ್ರದರ್ಶನ ನೀಡೋದ್ರಲ್ಲಿ ಎಡವಿದೆ. ಹೀಗಾಗಿ ನಿರ್ಮಾಪಕರು ನಿರೀಕ್ಷೆಗಿಂತ ಬೇಗ ಚಿತ್ರವನ್ನು ಓಟಿಟಿ ಬಿಡುಗಡೆ ಮಾಡಲು ಯೋಜನೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಜೊತೆ ಚಿತ್ರತಂಡ ರಿಲೀಸ್ ಬಳಿಕ ಎಂಟು ವಾರಗಳ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಈ ಒಪ್ಪಂದವನ್ನು ಮೊಟಕುಗೊಳಿಸಲು ಚಿತ್ರತಂಡ ಯೋಜಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ತನ್ನ ನಿಯಮ ಉಲ್ಲಂಘಿಸಿದ ಥಗ್‌ಲೈಫ್‌ಗೆ ಭಾರೀ ದಂಡದ ಹೊಡೆತ ನೀಡಿದೆ.

ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಚಿತ್ರಕ್ಕೆ ಷರತ್ತಿನ ಆಧಾರದ ಮೇಲೆ ಚಿತ್ರವನ್ನು ತಮ್ಮ ಚಿತ್ರಮಂದಿರಗಳಲ್ಲಿ ಸ್ಟ್ರೀಮ್‌ ಮಾಡಲು ಅವಕಾಶ ನೀಡಿತ್ತು. ಆದರೆ ಥಗ್‌ಲೈಫ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಜನರಿಲ್ಲದೆ ಥಿಯೇಟರ್‌ಗಳು ಬಣ ಬಣ ಎನ್ನುತ್ತಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್ ಇಲ್ಲದಿದ್ರೂ ಸುಮ್ಮನೆ ಬಾಡಿಗೆ ಕೊಟ್ಟು ಚಿತ್ರ ಪ್ರದರ್ಶನ ಮಾಡಬೇಕಾದ ದುಃಸ್ಥಿತಿ ಥಗ್‌ಲೈಫ್ ತಂಡಕ್ಕಿದೆ. ಹೀಗಾಗಿ ಮೊಟಕು ಮಾಡಿ ಓಟಿಟಿಗೆ ಕೊಡಲು ಟೀಮ್ ಯೋಜಿಸಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ಗೆ ಮನವಿ ಮಾಡಿಕೊಂಡಿತ್ತು. ಇದೀಗ ಒಪ್ಪಂದದ ಉಲ್ಲಂಘನೆಗಾಗಿ ನಿರ್ಮಾಪಕರಿಗೆ 25 ಲಕ್ಷ ರೂ.ಗಳ ಭಾರಿ ದಂಡವನ್ನು ವಿಧಿಸಿದೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್. ಆದ್ದರಿಂದ ಇದನ್ನ ಕಮಲ್ ಹಾಸನ್ ಹಠಕ್ಕಾಗಿ ತೆರುತ್ತಿರುವ ದಂಡ ಎನ್ನಬಹುದೇ?ಇದನ್ನೂ ಓದಿ: ‘ದೂರ ತೀರ ಯಾನ’ ಚಿತ್ರದಲ್ಲಿ ಶ್ರುತಿ ಹರಿಹರನ್ ಗೆಸ್ಟ್