ಏರ್‌ಪೋರ್ಟ್ ರೋಡ್ ಫ್ಲೈಓವರ್ ಮೇಲಿಂದ ಬಿದ್ದು ಯುವಕ ಅನುಮಾನಾಸ್ಪದ ಸಾವು

ಬೆಂಗಳೂರು: ಫ್ಲೈಓವರ್ ಮೇಲಿಂದ ಬಿದ್ದು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಏರ್‌ಪೋರ್ಟ್ ರೋಡ್‌ನ (Airport Road) ಮಾಲ್ ಆಫ್ ಏಷ್ಯಾ (Mall Of Asia) ಮುಂಭಾಗದ ರಸ್ತೆಯಲ್ಲಿ ನಡೆದಿದೆ.

ಹೆಬ್ಬಾಳದ (Hebbal) ಶಿವಶಂಕರ್ ಲೇಔಟ್ ನಿವಾಸಿ ಮುನಿರಾಜ್ (22) ಮೃತ ಯುವಕ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ.ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

ಭಾನುವಾರ ರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ತಾಯಿಗೆ ಸ್ನೇಹಿತರನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ಹೊರಟಿದ್ದ. ಫ್ಲೈಓವರ್ ಮೇಲೆ ಬೈಕ್ ನಿಲ್ಲಿಸಿ ಬಳಿಕ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಉಂಟಾಗಿದೆ. ಫ್ಲೈಓವರ್ ಕೆಳಭಾಗದ ರಸ್ತೆಯಲ್ಲಿ ಯುವಕನ ಶವ ಬಿದ್ದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇತ್ತ ತಡರಾತ್ರಿಯಾದರೂ ಮಗ ಮನೆಗೆ ಬಂದಿಲ್ಲ ಎಂದು ತಾಯಿ ಒಂದೇ ಸಮನೇ ಕರೆ ಮಾಡಿದ್ದು, ಪೊಲೀಸರು ಮಗ ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಈ ಕುರಿತು ಪೊಲೀಸರು ಹೆದ್ದಾರಿಯ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದು, ಸಾವನ್ನಪ್ಪಿದ್ದು ಹೇಗೆ ಎಂದು ತನಿಖೆಯಲ್ಲಿ ಹೊರಬರಬೇಕಿದೆ.

ಸದ್ಯ ಘಟನೆ ಸಂಬಂಧ ಕೊಡಿಗೆಹಳ್ಳಿ (Kodigehalli) ಠಾಣೆಯಲ್ಲಿ ಯುಡಿಆರ್ (UDR) ದಾಖಲಾಗಿದೆ.ಇದನ್ನೂ ಓದಿ: ನೀರಿನ ಬಾಟಲ್‌ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ಬ್ಯಾನ್‌