5 ನಿಮಿಷ ತಬ್ಬಿಕೊಳ್ಳಲು 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!

ಹಾಂಕಾಂಗ್: ಚೀನಾದಲ್ಲಿ (China) ‘ಪುರುಷ ಅಮ್ಮಂದಿರು’ (Man Mums) ಎಂದು ಕರೆಯಲ್ಪಡುವವರನ್ನು ಐದು ನಿಮಿಷ ತಬ್ಬಿಕೊಳ್ಳಲು ಮಹಿಳೆಯರು 600 ರೂ. ಕೊಡುವ ಪ್ರವೃತ್ತಿ ಬೆಳೆಯುತ್ತಿದೆ.

‘ಪುರುಷ ಅಮ್ಮಂದಿರು’ ಎಂದರೆ ಸಾಂತ್ವನ ಹೇಳುವ, ಒತ್ತಡ ನಿವಾರಿಸುವವರು. ಅವರನ್ನು ಅಪ್ಪಿಕೊಳ್ಳಲು ಮಹಿಳೆಯರು ಹಣ ನೀಡುತ್ತಾರೆ. ಇದಕ್ಕಾಗಿ ಚಾಟ್‌ ಅಪ್ಲಿಕೇಶನ್‌ಗಳಿವೆ. ಮಾಲ್‌ಗಳು, ಸುರಂಗಮಾರ್ಗ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪುಗೆ ನೀಡಲು ‘ಪುರುಷ ಅಮ್ಮಂದಿರು’ ಇರುತ್ತಾರೆ. ಇದನ್ನೂ ಓದಿ: ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

ನಾನು ಒತ್ತಡದಲ್ಲಿದ್ದೇನೆ. ಒತ್ತಡ ನಿಭಾಯಿಸಲು ಪುರುಷ ಅಮ್ಮನೊಂದಿಗೆ ಅಪ್ಪುಗೆಗೆ ಹಣ ನೀಡಲು ಬಯಸಿದ್ದೇನೆ ಎಂದು ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಳು.

ಹೆಚ್ಚಿನ ಅಪ್ಪುಗೆಗಳು ಶಾಪಿಂಗ್ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ. ಇದಕ್ಕೆ 20 ರಿಂದ 50 ಯುವಾನ್ ( 250 ರೂ. ರಿಂದ 600 ರೂ.) ವರೆಗೆ ವೆಚ್ಚವಾಗುತ್ತದೆ. ಮೂರು ಗಂಟೆಗಳ ಹೆಚ್ಚುವರಿ ಕೆಲಸದ ಒತ್ತಡದಲ್ಲಿದ್ದ ಮಹಿಳೆಯು, ಪುರುಷ ಅಮ್ಮನನ್ನು ಅಪ್ಪಿಕೊಂಡಳು. ಈ ಅಪ್ಪುಗೆ ಆಕೆಗೆ ತಾಯಿ ಭಾವನೆ ನೀಡಿತು. ಆ ಮಹಿಳೆ ತನ್ನ ಬಾಸ್‌ ಬಗ್ಗೆ ಹೇಳಿಕೊಂಡಳು. ಆ ಪುರುಷ ಅಮ್ಮ ಬೆನ್ನು ತಟ್ಟಿ ಸಮಾಧಾನಗೊಳ್ಳುವಂತೆ ತಿಳಿಸಿದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ