ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಲು ರೈತರ ನಿಯೋಗದಿಂದ ಆಹಾರ ಸಚಿವರಿಗೆ ಮನವಿ

ಬೆಂಗಳೂರು: ನೋಂದಣಿ ಮಾಡಿರುವ ರೈತರ ಜೋಳವನ್ನು ಖರೀದಿಸುವಂತೆ ರೈತರ ನಿಯೋಗ ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ (Bengaluru) ಆಹಾರ ಭವನದಲ್ಲಿ ರಾಯಚೂರಿನ (Raichuru) ಬಸವನಗೌಡ ಬಾದರ್ಲಿರವರ ನೇತೃತ್ವದ ರೈತ ಮುಖಂಡರ ನಿಯೋಗವು ಆಹಾರ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರು ಹೆಚ್ಚಾಗಿ ಜೋಳ ಬೆಳೆಯುತ್ತಾರೆ. ಹೀಗಾಗಿ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಖರೀದಿಸಿದರೆ ರೈತರಿಗೆ ಅನುಕೂಲಕರವಾಗುತ್ತದೆ ಎಂದು ಮುಖಂಡರು ಪ್ರಸ್ಥಾಪಿಸಿದರು.ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರದ ಗರಿಷ್ಠ ಮಿತಿಯನ್ನೂ ಮೀರಿದೆ. ಇನ್ನೂ ಎಂಎಸ್‌ಪಿ ಯೋಜನೆಯಡಿ ನೋಂದಣಿ ಮಾಡಿದ ರೈತರ ಹೆಚ್ಚುವರಿ ಜೋಳವನ್ನು ಖರೀದಿಸಲು ಮುಂದಿನ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಶಾಸಕರಾದ ಬಸವನಗೌಡ ಬಾದರ್ಲಿ, ರೈತ ಮುಖಂಡರು ಇದ್ದರು.ಇದನ್ನೂ ಓದಿ: ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ