ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

ಬೆಂಗಳೂರು: ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್‌ಗಳು ಟಚ್ ಆಗಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ರೋಡ್ (Mysuru Road) ಫ್ಲೈಓವರ್‌ನಲ್ಲಿ ನಡೆದಿದೆ.

ಮೃತರನ್ನು ಆಕಾಶ್ ಮತ್ತು ಅಫ್ಜಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಣಿ ಮತ್ತು ಆಸಿಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅನೈತಿಕ ಸಂಬಂಧದಲ್ಲಿ ಮನಸ್ತಾಪ – ನಿವೃತ್ತ ಇನ್ಸ್‌ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಮಹಿಳೆ

ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮಂಗಳೂರು ಮೂಲದವರಾದ ಆಸಿಮ್, ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 2ರ ಸುಮಾರಿಗೆ ಊಟಕ್ಕೆಂದು ಹೊರಗೆ ಹೊರಟಿದ್ದರು. ಇದೇ ವೇಳೆ ಕೆಪಿ ಅಗ್ರಹಾರ ನಿವಾಸಿಗಳಾದ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಣಿ, ಆಕಾಶ್ ಅದೇ ರಸ್ತೆಯಲ್ಲಿ ಹೊರಟಿದ್ದರು. ಈ ವೇಳೆ ಓವರ್‌ಟೇಕ್ ಮಾಡಲು ಬೈಕ್ ಸವಾರರಿಬ್ಬರು ವೇಗವಾಗಿ ಓಡಿಸಿದ್ದಾರೆ. ಪರಿಣಾಮ ಬೈಕ್‌ಗಳು ಪರಸ್ಪರ ಟಚ್ ಆಗಿದ್ದು, ರಸ್ತೆಗೆ ಬಿದ್ದಿದ್ದಾರೆ.

ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ