ರಾಜಸ್ಥಾನದ ಮೂವರು ಸಚಿವರಿದ್ದ ಹೋಟೆಲ್‌ಗೆ ಬಾಂಬ್ ಬೆದರಿಕೆ ಸಂದೇಶ

ಜೈಪುರ: ರಾಜಸ್ಥಾನದ (Rajastan) ಮೂವರು ಸಚಿವರಿದ್ದ 2 ಹೋಟೆಲ್‌ಗಳಿಗೆ ಶನಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಬಂದಿದೆ. ಇದು ಹುಸಿ ಬಾಂಬ್ ಸಂದೇಶ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೈಪುರದ 2 ಪ್ರಸಿದ್ಧ ಹೋಟೆಲ್‌ಗಳಾದ ಹಾಲಿಡೇ ಇನ್ (Holiday Inn) ಹಾಗೂ ರಫೆಲ್ಸ್ ಹೋಟೆಲ್‌ಗೆ (Raffles Hotel) ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದವು. ಈ ಹೋಟೆಲ್‌ಗಳಲ್ಲಿ ರಾಜಸ್ಥಾನದ ಗೃಹ ಸಚಿವ ಜವಾಹರ್ ಸಿಂಗ್ ಬೆಧಮ್, ಕೌಶಲ್ಯ, ಉದ್ಯೋಗ ಮತ್ತು ಉದ್ಯಮಶೀಲತೆ ಸಚಿವ ಕೆ.ಕೆ. ವಿಷ್ಣೋಯ್ ಮತ್ತು ಸಹಕಾರಿ ಸಚಿವ ಗೌತಮ್ ಡಾಕ್ ಅವರು ಹಾಲಿಡೇ ಇನ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್

ಮೊದಲು ಹಾಲಿಡೇ ಇನ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವು ಹೋಟೆಲ್‌ನ ಸುತ್ತಲೂ ಸಂಪೂರ್ಣ ಶೋಧ ಕಾರ್ಯ ನಡೆಸಿದವು. ಆದರೆ ಹೋಟೆಲ್‌ಗಳಲ್ಲಿ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಬೆದರಿಕೆ ಎಂದು ಹೆಚ್ಚುವರಿ ಡಿಸಿಪಿ ಲಲಿತ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಅತ್ತಿಗೆಯ ಶಿರಚ್ಛೇದನ, ರುಂಡ ಹಿಡಿದು ಊರೆಲ್ಲಾ ಸುತ್ತಾಡಿ ಪೊಲೀಸರಿಗೆ ಶರಣಾದ ದುಷ್ಕರ್ಮಿ

ಸ್ಪಲ್ವ ಸಮಯದ ಬಳಿಕ ಅಪರಿಚಿತ ಇಮೇಲ್ ಮೂಲಕ ರಫೆಲ್ಸ್‌ ಹೋಟೆಲ್ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ಆದರೆ ಇಲ್ಲೂ ಯಾವುದೇ ಸ್ಫೋಟಕಗಳು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.