ಪಾಕ್ ಪರ ನೀಡಿದ್ದ ಹೇಳಿಕೆಗೆ ಶಶಿ ತರೂರ್ ಆಕ್ಷೇಪ ಬೆನ್ನಲ್ಲೇ ಕೊಲಂಬಿಯಾ ಯೂಟರ್ನ್ – ಭಾರತಕ್ಕೆ ರಾಜತಾಂತ್ರಿಕ ಯಶಸ್ಸು

– ನಾವು ಶಾಂತಿಪ್ರಿಯರೇ… ಹಾಗಂತ ಕೆಣಕಿದ್ರೆ ಸುಮ್ಮನಿರಲ್ಲ – ಪಾಕ್‌ಗೆ ಪಂಚ್‌

ನವದೆಹಲಿ: ಪಾಕಿಸ್ತಾನದ (Pakistan) ಮುಖವಾಡವನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಳಚುತ್ತಿರುವ ಭಾರತದ ಸರ್ವಪಕ್ಷ ನಿಯೋಗಕ್ಕೆ ಕೊಲಂಬಿಯಾ (Colombia) ದೇಶದ ಬೆಂಬಲ ಸಿಕ್ಕಿದೆ.

ʻಭಾರತದ ದಾಳಿಯಿಂದ ಜೀವಹಾನಿಯಾಗಿದೆʼ ಅಂತ ಪಾಕಿಸ್ತಾನಕ್ಕೆ ಸಹಾನುಭೂತಿ ವ್ಯಕ್ತಪಡಿಸಿದ್ದ ಕೊಲಂಬಿಯಾ ಈಗ ತನ್ನ ಹೇಳಿಕೆ ಹಿಂಪಡೆದಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

ಕೊಲಂಬಿಯಾ ವಿರುದ್ಧ ನಿನ್ನೆಯಷ್ಟೇ ಶಶಿ ತರೂರ್ (Shashi Tharoor) ಬೇಸರ ವ್ಯಕ್ತಪಡಿಸಿದ್ದರು. ಭಾರತದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಕೊಲಂಬಿಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ರೋಸಾ ಯೋಲಾಂಡಾ ವಿಲ್ಲಾವಿಸೆನ್ಸಿಯೊ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

ಈ ಬಗ್ಗೆ ಹೇಳಿಕೆ ನೀಡಿದ ಶಶಿ ತರೂರ್ ನಾವು ಕೊಲಾಂಬಿಯಾದ ವಿದೇಶಾಂಗ ಸಚಿವಾಲಯವನ್ನ ಭೇಟಿಯಾದೆವು. ಅಲ್ಲಿ ನಮಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಜೊತೆಗೆ ನಮಗೆ ಒಳ್ಳೆಯ ಸುದ್ದಿ ಕೂಡ ಕಾದಿತ್ತು. ಅದು ಪಾಕಿಸ್ತಾನದಲ್ಲಿ ಸತ್ತವರಿಗೆ ಸಂತಾಪ ಸೂಚಿಸಿ ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡದ್ದು, ಪಾಕ್​​​​ ಪರ ಈ ಹೇಳಿಕೆ ನೀಡಿದಕ್ಕೆ ನಿರಾಶೆಯನ್ನು ನಾವು ವ್ಯಕ್ತಪಡಿಸಿದ್ದೇವು. ಇದೀಗ ಕೊಲಾಂಬಿಯಾ ತನ್ನ ಈ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಮಹಾತ್ಮ ಗಾಂಧೀಜಿ ಅಹಿಂಸಾವಾದಿ, ಶಾಂತಿಪ್ರಿಯರು. ಹಾಗೆಂದು ಕೆಣಕಿದ್ರೆ ಭಾರತ ಸುಮ್ಮನಿರಲ್ಲ ಅಂತ ಪಾಕ್‌ಗೆ ಪಂಚ್ ಕೊಟ್ಟಿದ್ದಾರೆ. ಬಳಿಕ ಅಲ್ಲಿನ ತದೇಯೋ ವಿಶ್ವವಿದ್ಯಾಲಯದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ತಲೆಬಾಗಿ ನಮಸ್ಕರಿಸಿದ್ದಾರೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್