ಭ್ರಷ್ಟರ ವಿರುದ್ಧ ಬಾಲ್ಯದಿಂದಲೂ ಹೋರಾಟ- ಶೋಷಿತರ ಪಾಲಿಗೆ ಆಶಾಕಿರಣ ನಮ್ಮ ಪಬ್ಲಿಕ್ ಹೀರೋ

ಗದಗ: ರಾಜಕಾರಣಿಯೊಬ್ಬರ ನಡತೆ ವಿರುದ್ಧ ಬಾಲ್ಯದಿಂದಲೇ ಸೆಟೆದು ನಿಂತ ನಮ್ಮ ಈ ಪಬ್ಲಿಕ್ ಹೀರೋ ಇವತ್ತು ಬಡವರ, ಶೋಷಿತರ, ವಯೋವೃದ್ಧರ ಸಹಾಯಕ್ಕೆ ನಿಂತಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ನಿವಾಸಿ ಯಲ್ಲನಗೌಡ ನಿಂಗನಗೌಡ ಗೌಡರ್ ನಮ್ಮ ಪಬ್ಲಿಕ್ ಹೀರೋ. ಸಮಾಜ ಸೇವಕ, ಹೋರಾಟಗಾರ, ಪರಿಸರ ಪ್ರೇಮಿ, ಕೃಷಿಕ, ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಬಡಕುಟುಂಬದ ಯಲ್ಲನಗೌಡ ಎಸ್‍ಎಸ್‍ಎಲ್‍ಸಿ ಮುಗಿಸಿದಾಗ ಕೆಲಸ ಕೊಡಿಸುವಂತೆ ಕಾಲಿಗೆ ಬಿದ್ದಿದ್ದ ತಂದೆಯನ್ನ ರಾಜಕಾರಣಿಯೊಬ್ರು ಒದ್ದು ಹೋಗಿದ್ರಂತೆ. ಅಂದಿನಿಂದಲೇ ಸ್ವಾಭಿಮಾನ ಬೆಳೆಸಿಕೊಂಡು, ಭ್ರಷ್ಟರ ವಿರುದ್ಧ ಸಿಡಿದೆದ್ದು ದೀನರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ.

ಇವರ ಜನೋಪಕಾರಿ ಕಾರ್ಯದಿಂದಾಗಿ 1990ರಲ್ಲಿ ಮುಂಡರಗಿ ನಗರಸಭೆ ಸದಸ್ಯ, ಅಧ್ಯಕ್ಷರಾಗಿ ಜನಮೆಚ್ಚುವಂತಹ ಕಾರ್ಯ ಮಾಡಿದ್ದಾರೆ. ಸರ್ಕಾರದಿಂದ ಅನುದಾನ ಸಿಗದಿದ್ದಾಗ ಹವ್ಯಾಸಿ ಕಲಾವೃಂದದ ಸಂಘ ಸ್ಥಾಪಿಸಿ ನಾಟಕವಾಡಿ ಹಣ ಸಂಗ್ರಹ್ರಿಸಿ ತಮ್ಮ ವ್ಯಾಪ್ತಿಯ ಶಿರೊಳ, ರಾಮೇನಹಳ್ಳಿ, ಬ್ಯಾಲಡಗಿಯಲ್ಲಿ ಎರಡು ಉರ್ದು ಹಾಗೂ ಎಂಟು ಪ್ರಾಥಮಿಕ ಶಾಲಾ ಕೊಠಡಿಗಳನ್ನ ನಿರ್ಮಿಸಿದ್ದಾರೆ.

ಜಾತಿ, ಪಕ್ಷ ಭೇದ ಮರೆತು ಪೊಸ್ಕೊ, ಕಪ್ಪತ್ತಗುಡ್ಡ ಸಂರಕ್ಷಣೆ, ತಾಲೂಕು ಅಭಿವೃದ್ಧಿ, ಏತನೀರಾವರಿ, ಸಾಲ ಸೌಲಭ್ಯ, ಮರಳುನಿಂದ ನದಿಗಳ ರಕ್ಷಣೆ ಹೀಗೆ ಅನೇಕ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದಾರೆ.

https://www.youtube.com/watch?v=z5HNG4II_Rs

Comments

Leave a Reply

Your email address will not be published. Required fields are marked *