ಆಂಧ್ರದಲ್ಲಿ ಸೈನಿಕರ ಆಸ್ತಿಗೆ ತೆರಿಗೆ ವಿನಾಯಿತಿ: ಪವನ್ ಕಲ್ಯಾಣ್

ಅಮರಾವತಿ: ಆಂಧ್ರಪ್ರದೇಶದ (Andhra Pradesh) ಗ್ರಾಮ ಪಂಚಾಯತಿ ಮಿತಿಯೊಳಗಿನ ಸೈನಿಕರ ಒಡೆತನದ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ (Property Tax Exemption) ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಘೋಷಿಸಿದ್ದಾರೆ.

ಈ ಬಗ್ಗೆ ಅವರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ಈ ಹಿಂದೆ ನಿವೃತ್ತ ಸೈನಿಕರು ಅಥವಾ ಗಡಿಗಳಲ್ಲಿ ನಿಯೋಜನೆಗೊಂಡವರಿಗೆ ಸೀಮಿತವಾಗಿತ್ತು. ಇನ್ನುಮುಂದೆ ಈ ವಿನಾಯಿತಿಯು ದೇಶದ ಯಾವುದೇ ಭಾಗದಲ್ಲಿ ನಿಯೋಜನೆಗೊಂಡ ಎಲ್ಲಾ ಸಕ್ರಿಯ ಸಿಬ್ಬಂದಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, CRPF ಮತ್ತು ಅರೆಸೈನಿಕ ಪಡೆಗಳಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ರಾಷ್ಟ್ರಕ್ಕಾಗಿ ಅವರ ಸೇವೆ ಅಮೂಲ್ಯವಾದುದ್ದು. ಸಿಬ್ಬಂದಿ ಅಥವಾ ಅವರ ಸಂಗಾತಿ ವಾಸಿಸುವ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸೈನಿಕ ಕಲ್ಯಾಣ ನಿರ್ದೇಶಕರ ಶಿಫಾರಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ರಾಷ್ಟ್ರದ ರಕ್ಷಕರಿಗೆ ಆಂಧ್ರದ ಗೌರವ ಮತ್ತು ಕೃತಜ್ಞತೆಯನ್ನು ಎತ್ತಿತೋರಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು