ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

ಇಸ್ಲಾಮಾಬಾದ್: ಭಾರತ-ಪಾಕ್ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ವೇಳೆ ಪಾಕ್ ಸೇನೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉಗ್ರ ಒಸಾಮಾ ಬಿನ್ ಲಾಡೆನ್‌ (Osama Bin Laden) ಆಪ್ತನ ಮಗನೇ ಈಗ ಪಾಕ್ ಸೇನಾ ವಕ್ತಾರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿದುಬಂದಿದೆ.

ಭಾರತದ ವಿರುದ್ಧ ಪಾಕಿಸ್ತಾನದ ಅಘೋಷಿತ ಕದನ ಸಾಗಿರುವ ನಡುವೆಯೇ ಪಾಕಿಸ್ತಾನ ಸೇನಾ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಒಸಾಮಾ ಬಿನ್ ಲ್ಯಾಡೆನ್ ಆಪ್ತನ ಮಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಮಾ ಬಿನ್ ಲಾಡೆನ್ ಆಪ್ತ ಪಾಕಿಸ್ತಾನದ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಮಗ ಅಹ್ಮದ್ ಷರೀಫ್ ಚೌಧರಿ ಈಗಿನ ಪಾಕ್ ಸಾರ್ವಜನಿಕ ಸಂಪರ್ಕಾಧಿಕಾರಿಯೆಂದು ತಿಳಿದುಬಂದಿದೆ.

ಈ ಮೊದಲು ಲಾಡೆನ್ ಆಪ್ತ ಉಗ್ರರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನ ಹಸ್ತಾಂತರಿಸಲು ಯತ್ನಿಸಿದ್ದರು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪ ಹೊತ್ತಿದ್ದರು. ಬಳಿಕ ಅವರನ್ನು ವಿಶ್ವಸಂಸ್ಥೆ ನಿರ್ಬಂಧಿಸಿತ್ತು.ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌