ಆಮೀರ್ ಖಾನ್ ನಿವಾಸಕ್ಕೆ ಅಲ್ಲು ಅರ್ಜುನ್ ಭೇಟಿ- ಒಟ್ಟಿಗೆ ಸಿನಿಮಾ ಮಾಡ್ತಾರಾ?

ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಮುಂಬೈ ನಿವಾಸಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಭೇಟಿ ನೀಡಿದ್ದಾರೆ. ಇಬ್ಬರೂ ಒಟ್ಟಿಗಿರುವ ಫೋಟೋ ವೈರಲ್ ಆಗಿದೆ. ಈ ಹಿನ್ನೆಲೆ ಇಬ್ಬರೂ ಜೊತೆಯಾಗಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ:ಆಪರೇಷನ್ ಸಿಂಧೂರ | ಇದು ಭಾರತೀಯ ಸೇನೆಯ ನಿಜವಾದ ಮುಖ: ಶಿವಕಾರ್ತಿಕೇಯನ್

‘ಜವಾನ್’ ಡೈರೆಕ್ಟರ್ ಅಟ್ಲಿ ಜೊತೆಗಿನ ಸಿನಿಮಾ ಕೆಲಸ ನಡುವೆ ಆಮೀರ್ ಖಾನ್‌ರನ್ನು ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಹಲವು ಸಮಯ ನಟನೊಟ್ಟಿಗೆ ಸಮಯ ಕಳೆದಿದ್ದಾರೆ. ಬಳಿಕ ಆಮೀರ್ ಜೊತೆ ಅಲ್ಲು ಅರ್ಜುನ್ ಕ್ಯಾಮೆರಾಗೆ ನಗುತ್ತಾ ಪೋಸ್ ನೀಡಿದ್ದಾರೆ. ಹೀಗಾಗಿ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸ್ಟಾರ್ ನಟರಿಬ್ಬರು ಸಿನಿಮಾ ಮಾಡಲಿ ಎಂದೇ ಫ್ಯಾನ್ಸ್ ಆಶಿಸುತ್ತಿದ್ದಾರೆ. ಇದನ್ನೂ ಓದಿ:ರಿಯಲ್ ಹೀರೋಗಳು ನೀವೇ – ‘ಆಪರೇಷನ್ ಸಿಂಧೂರ’ಕ್ಕೆ ಮಮ್ಮುಟ್ಟಿ ಮೆಚ್ಚುಗೆ

ಅಂದಹಾಗೆ ಸಿತಾರೆ ಜಮೀನ್ ಪರ್, ‘ಕೂಲಿ’ ಸಿನಿಮಾ ಕೆಲಸದಲ್ಲಿ ಆಮೀರ್ ತೊಡಗಿಸಿಕೊಂಡಿದ್ದಾರೆ. ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸಬರ ಸಿನಿಮಾ ಕನಸಿಗೆ ಅವರು ಬೆಂಬಲಿಸುತ್ತಿದ್ದಾರೆ.

‘ಪುಷ್ಪ 2’ ಭರ್ಜರಿ ಸಕ್ಸಸ್ ಬಳಿಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡ್ತಿದ್ದಾರೆ. ಇದು ಬಹುಭಾಷೆಗಳಲ್ಲಿ ಮೂಡಿ ಬರಲಿದೆ.