ಬೆಂಗಳೂರು: ವೈದ್ಯರ ಬೇಜವಾಬ್ದಾರಿ ನಡೆಯಿಂದ ಆನೇಕಲ್‍ನಲ್ಲಿ ತಂದೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಕಂದನ ಶವವನ್ನು ಹೊತ್ತುಕೊಂಡು ಹೋದ ಅಮಾನವೀಯ ಘಟನೆ ನಡೆದಿದೆ.
ಅಸ್ಸಾಂನಿಂದ ಕೂಲಿ ಕೆಲಸಕ್ಕಾಗಿ ಬಂದಿದ್ದ ದಂಪತಿಯ 3 ವರ್ಷದ ಮಗ ರಹೀಂ ಇಂದು ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ. ಈ ವೇಳೆ ಬೈಕಿನಲ್ಲಿ ಬಂದ ಸವಾರನೊಬ್ಬ ರಹೀಂಗೆ ಗುದ್ದಿ ಪರಾರಿಯಾಗಿದ್ದಾನೆ.
ಗಾಯಗೊಂಡಿದ್ದ ಮಗನನ್ನು ಚಿಕಿತ್ಸೆ ನೀಡಲು ತಂದೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ನೀಡಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.
ಅಪಘಾತ ನಡೆದು ವ್ಯಕ್ತಿ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರ ಕರ್ತವ್ಯ. ಆದರೆ ಮರಣೋತ್ತರ ಪರೀಕ್ಷೆ ನಡೆಸದೇ ಮೃತದೇಹವನ್ನು ಪೋಷಕರಿಗೆ ನೀಡಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ಆಳುತ್ತಿದ್ದ ತಂದೆಯನ್ನು ಸಮಾಧಾನ ಪಡಿಸಿದ ಸ್ಥಳೀಯರು ತಮ್ಮ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿ ಮನೆಗೆ ಅವರನ್ನು ತಲುಪಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=GnVn5L5_50w




Leave a Reply