Haveri | ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಡ್ರೈವರ್

ಹಾವೇರಿ: ಸಾರಿಗೆ ಬಸ್ ನಿಲ್ಲಿಸಿ ಹಾವೇರಿ ಮಾರ್ಗ ಮಧ್ಯದಲ್ಲಿ ಕಂಡಕ್ಟರ್ ಕಂ ಡ್ರೈವರ್(Driver) ನಮಾಜ್ (Namaz) ಮಾಡಿದ ವೀಡಿಯೋ ವೈರಲ್ ಆಗಿದೆ.

ಹಾನಗಲ್ ಟು ವಿಶಾಲಗಡ್ ಬಸ್ ಡ್ರೈವರ್ ಕಂ ಕಂಡಕ್ಟರ್ ಬಸ್‌ನಲ್ಲೇ ನಮಾಜ್ ಮಾಡಿದ್ದಾರೆ. ಮಂಗಳವಾರ ಸಂಜೆ ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಸಮಯಕ್ಕೆ ಡ್ರೈವರ್ ನಮಾಜ್ ಮಾಡಿದ್ದಾರೆ. ಇದನ್ನೂ ಓದಿ: ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ

ಇದನ್ನು ನೋಡಿದ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ಪ್ರಯಾಣಿಕರೊಬ್ಬರು ಇದರ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಕರ್ತವ್ಯದ ಅವಧಿಯಲ್ಲಿಯೇ ನಮಾಜ್ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.‌ ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ