ಕಲಬುರಗಿ| ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಮೂವರ ದಾರುಣ ಸಾವು

ಕಲಬುರಗಿ: ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಗಳನ್ನು ನೀಡಲು ತೆರಳುತ್ತಿದ್ದ ವೇಳೆ ರಸ್ತೆ ಬಂದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಸೇಡಂ ತಾಲೂಕಿನ ಮಳಖೇಡ ಬಳಿ ಸಂಭವಿಸಿದೆ.

ಮಹೇಶ್ (32), ಪ್ರೇಮ್‍ಕುಮಾರ್ (25), ಅನ್ನದಾನಯ್ಯ (25) ಸಾವನ್ನಪ್ಪಿದ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಿತ್ಯಾನಂದ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಪಾಕ್‌ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ

ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಕಾರಣ ಎಲ್ಲ ನಾಲ್ವರು ಕಾರಿನಲ್ಲಿ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಗಳನ್ನು ನೀಡಲು ಹೊರಟಿದ್ದರು. ಈ ಮಧ್ಯೆ, ಮಳಖೇಡ ಸಮೀಪದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕಾರು ಅಪ್ಪಳಿಸಿದ್ದರಿಂದ ಈ ದುರಂತ ನಡೆದಿದೆ.

ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌