ಅಯೋಧ್ಯೆ ಸೂರ್ಯ ತಿಲಕದ ವೇಳೆಯೇ ರಾಮಸೇತು ದರ್ಶನ ಪಡೆದ ಮೋದಿ

ನವದೆಹಲಿ: ಶ್ರೀಲಂಕಾದಿಂದ ಭಾರತಕ್ಕೆ ಹಿಂದಿರುಗುವಾಗ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಮಸೇತು (Ram Setu) ದರ್ಶನ ಪಡೆದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಹಿಂತಿರುಗುವಾಗ, ರಾಮಸೇತು ದರ್ಶನ ಪಡೆಯುವ ಪುಣ್ಯ ಸಿಕ್ಕಿತು. ಕಾಕತಾಳೀಯ ಎಂಬಂತೆ ರಾಮನವಮಿಯಂದು (Ram Navami) ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿದ್ದ ಸಮಯದಲ್ಲಿ ನನಗೆ ರಾಮಸೇತು ದರ್ಶನ ಭಾಗ್ಯ ಸಿಕ್ಕಿತು. ಪ್ರಭು ಶ್ರೀರಾಮ ನಮ್ಮೆಲ್ಲರಿಗೂ ಒಗ್ಗೂಡಿಸುವ ಶಕ್ತಿ. ಅವನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1996ರ ವಿಶ್ವಕಪ್ ಗೆದ್ದ ಲಂಕಾ ಕ್ರಿಕೆಟ್‌ ದಿಗ್ಗಜರ ಜೊತೆ ಮೋದಿ ಸಂವಾದ!

ರಾಮಸೇತುವು ಭಾರತದಲ್ಲಿ ಅನೇಕರಿಂದ ರಾಮ ಮತ್ತು ಲಂಕಾಗೆ ಹೋಗಿ ರಾವಣನ ಮೇಲೆ ಯುದ್ಧ ಮಾಡಲು ನಿರ್ಮಿಸಿದ ಸೇತುವೆಯ ಭಾಗ ಎಂದು ನಂಬಲಾಗಿದೆ.

ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಮತ್ತು ರಾಮನವಮಿಯ ಸಂದರ್ಭದಲ್ಲಿ ಪ್ರಾರ್ಥಿಸಲು ಮೋದಿ ಇಂದು ತಮಿಳುನಾಡಿಗೆ ತೆರಳಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ