ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಾಯಿ ಕಿಮ್ (Kim) ಇಂದು (ಏ.6) ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾಗಿದ್ದಾರೆ. ನಟಿಯ ತಾಯಿಯ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ. ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಫ್ಯಾನ್ಸ್‌ ತರಾಟೆ

ಹಲವು ದಿನಗಳಿಂದ ಜಾಕ್ವೆಲಿನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾ.24ರಂದೇ ಕಿಮ್ ಫರ್ನಾಂಡಿಸ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಐಸಿಯುಗೆ ದಾಖಲಿಸಲಾಗಿತ್ತು. ಆ ವೇಳೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ನಟಿಯ ಆಪ್ತರು ಆಸ್ಪತ್ರೆಗೆ ಆಗಮಿಸಿ ಕಿಮ್ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಇದನ್ನೂ ಓದಿ:ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

ಆದರೆ ಇಂದು ಪಾರ್ಶ್ವವಾಯುವಿಗೆ ತುತ್ತಾಗಿ ಜಾಕ್ವೆಲಿನ್ ತಾಯಿ ಕಿಮ್ ವಿಧಿವಶರಾಗಿದ್ದಾರೆ.