ನನ್ನ ಹತ್ಯೆಗೆ ಸುಪಾರಿ – ಹೊಸ ಬಾಂಬ್‌ ಸಿಡಿಸಿದ ಸಚಿವ ರಾಜಣ್ಣ ಪುತ್ರ

– ಹನಿಟ್ರ್ಯಾಪ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌ – ಡಿಜಿಪಿಗೆ ದೂರು

ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣಕ್ಕೆ (Honeytrap Case) ಸಂಬಂಧಿಸಿದಂತೆ ಕೊನೆಗೂ ಸಚಿವ ರಾಜಣ್ಣ ಪುತ್ರ ಡಿಜಿಪಿಗೆ ದೂರು ನೀಡಿದ್ದಾರೆ. ಯಾರ ಹೆಸರು, ಫೋನ್‌ ನಂಬರ್‌ ನೀಡದೇ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹನಿಟ್ರ್ಯಾಪ್‌ಗೆ ಬಂದವರು ತಮ್ಮ ಹತ್ಯೆಗೆ ಯತ್ನಿಸಿದ್ರು ಅಂತ ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಹೊಸ ಬಾಂಬ್‌ ಸಿಡಿಸಿದರು.

ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ. ಸಚಿವರು ಕೂಡ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನನ್ನ ಮೇಲೆ ಹನಿಟ್ರ‍್ಯಾಪ್ ಆಗಿಲ್ಲ, ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಾ ಇತ್ತು ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಮಾಡಿ ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ಬಿಜೆಪಿ ಒಪ್ಪಿಕೊಂಡಿದೆ: ಪ್ರಿಯಾಂಕ್ ಖರ್ಗೆ

ಮುಂದುವರಿದು… ನವೆಂಬರ್ 16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕೋಕೆ ಸ್ವಲ್ಪ ಜನ ಬಂದಿದ್ರು. ಆ ಸಂದರ್ಭದಲ್ಲಿ ಹತ್ಯೆ ಮಾಡಲು ಪ್ರಯತ್ನ ಮಾಡಿದ್ರು ಎಂದು ಸೋಮ, ಭರತ್ ಇಬ್ಬರ ಹೆಸರನ್ನು ಉಲ್ಲೇಖ ಮಾಡಿದರು.

ನನಗೆ ಇದು ಜನವರಿಯಲ್ಲಿ ಮಾಹಿತಿ ಸಿಕ್ಕಿತು. ನನ್ನ ಆಪ್ತರ ಮೂಲಕ ಆಡಿಯೋ ಸಿಕ್ಕಿತು. ಆಡಿಯೋದಲ್ಲಿ 5 ಲಕ್ಷ ಸುಪಾರಿ ನೀಡಿದ್ರು. ಮೂರು ಜನ ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಈ ಸಂಬಂಧ ಎಸ್ಪಿಗೆ ದೂರು ನೀಡಲು ಡಿಜಿ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

ರಾಜಣ್ಣ ಹನಿಟ್ರ‍್ಯಾಪ್ರಪ್ ಪ್ರಕರಣ ಸಿಐಡಿಗೆ ಹೋಗಿದೆ, ಮನೆಯ ಬಳಿ ಸಾಕ್ಷ್ಯಾಧಾರ ಕಲೆ ಹಾಕೋದಕ್ಕೆ ಪೊಲೀಸರು ಹೋಗಿದ್ದಾರೆ. ಜಯಮಹಲ್ ರಸ್ತೆಯ ಮನೆಯಲ್ಲಿ ಪರಿಶೀಲನೆ ಮಾಡ್ತಾ ಇದ್ದಾರೆ. ಮನೆ ಕೆಲಸದವರ ಹೇಳಿಕೆ ಪಡೆದಿದ್ದಾರೆ. ಈ ಪ್ರಕರಣದ ಹಿಂದಿರುವ ಮಹಾನಾಯಕ ಯಾರು ಅನ್ನೋದು ಯಾರು ಅನ್ನೋದು ಗೊತ್ತಿಲ್ಲ. ನಾನು ಯಾರ ಹೆಸರನ್ನು ಕೂಡ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – 104 ಪುಟಗಳ ವರದಿ ಸಿಎಂಗೆ ಹಸ್ತಾಂತರ ಮಾಡಿದ ಆಯೋಗ