ರಾಜಣ್ಣರನ್ನ `ಹನಿ’ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನಿಸಿದ್ದಾರೆ – ಪುತ್ರ ರಾಜೇಂದ್ರ

– ನನಗೂ ವಿಡಿಯೋ ಕಾಲ್ ಬಂದಿತ್ತು ಎಂದ ಎಂಎಲ್‌ಸಿ

ತುಮಕೂರು: ಸಚಿವ ರಾಜಣ್ಣ ಅವರನ್ನ ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನ ಮಾಡಿದ್ದಾರೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಹೇಳಿದರು.

`ಪಬ್ಲಿಕ್ ಟಿವಿ’ ಜೊತೆ ಹನಿಟ್ರ‍್ಯಾಪ್ (Honey Trap) ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡುತ್ತೇನೆ. 3-4 ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಹೇಳುತ್ತೇವೆ. ನನಗೂ ಫೋನ್ ಕಾಲ್ ಹಾಗೂ ವೀಡಿಯೋ ಕಾಲ್ ಮೂಲಕ ಟ್ರ‍್ಯಾಪ್ ಮಾಡಲು ಪ್ರಯತ್ನ ಮಾಡಿದ್ದರು. ಆ ಎಲ್ಲಾ ನಂಬರ್ ಹಾಗೂ ಕಾಲ್ ಡೀಟೆಲ್ಸ್ ನನ್ನ ಬಳಿ ಇದೆ. ಡಿಜಿಗೆ ಈ ಮೂಲಕ ದೂರು ಕೊಡುತ್ತೇನೆ. ಜೊತೆಗೆ ರಾಜಣ್ಣರಿಗೆ ಲೇಡಿ ಸಹಿತ ಮೂರ್ನಾಲ್ಕು ಜನ ಬಂದು ಬಲೆಗೆ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ರು.ಇದನ್ನೂ ಓದಿ: ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ‌ ಹೊರಬಿತ್ತು ಬಿಗ್‌ ಅಪ್‌ಡೇಟ್

ಇದಕ್ಕೂ ಮುನ್ನ ಮಧುಗಿರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ (Ranganath) ನನಗೆ ಫೋನ್ ಮಾಡಿ ಧಮ್ಕಿ ಹಾಕುತ್ತಾರೆ. 2 ತಿಂಗಳಿಂದ ಕುಣಿಗಲ್ ಕ್ಷೇತ್ರದವರು ಲಿಂಕ್ ಕೆನಾಲ್ ವಿಚಾರವಾಗಿ ಫೋನ್ ಮಾಡುತ್ತಿದ್ದರು. ಲಿಂಕ್ ಕೆನಾಲ್ ಕಾಮಗಾರಿ ನಾನು ಹಾಗೂ ಸಚಿವರು ನಿಲ್ಲಿಸುತ್ತೇವೆ. ನೀವು ತಡೆಯುತ್ತೀರಾ? ನಮ್ಮ ತಾಲೂಕಿಗೆ ನೀರು ಬರುವುದನ್ನು ನೀವು ಅಪ್ಪ, ಮಗ ಯಾಕೆ ಅಡಚಣೆ ಮಾಡ್ತೀರಾ? ಎಂದು ಧಮಕಿ ಹಾಕಿದ್ದಾರೆ ಎಂದು ಹೇಳಿದರು.

ಡಿಕೆಶಿ (DK Shivakumar) ಕನಸಿನ ಕೂಸು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಪರೋಕ್ಷವಾಗಿ ವಿರೋಧಿಸಿದ ಅವರು, ಲಿಂಕ್ ಕೆನಾಲ್‌ನ್ನು ನಾವು ತಡೆದಿಲ್ಲ. ಟೆಂಡರ್ ಆಗಿದೆ ಕಾಮಗಾರಿ ನಡೆಯುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್‌ (Hemavathi Express) ಕೆನಾಲ್‌ನಿಂದ ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ತೊಂದರೆ ಆಗುತ್ತದೆ. ನಮ್ಮ ಕುಡಿಯುವ ನೀರನ್ನು ನೀವು ದಾರಿ ಮಧ್ಯದಲ್ಲೇ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು? ಎಂದು ಕಿಡಿಕಾರಿದರು.

ಇನ್ನೂ ಸಹಕಾರಿ ಸಚಿವರಿಂದ ಸಹಕಾರ ಸಿಗುತ್ತಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದ ಕುಣಿಗಲ್ ಶಾಸಕ ರಂಗನಾಥ್‌ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸಂಬಂಧಿ ಪ್ರಭಾವಿ ಸಚಿವರಿದ್ದಾರೆ ಎಂದು ಹೇಳಿ ನೀವು ನೀರು ತೆಗೆದುಕೊಂಡು ಹೋಗಬಹುದಾ? ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರದಲ್ಲಿ ಜಿಲ್ಲೆಗೆ ಆಗುವ ಅನ್ಯಾಯವನ್ನು ರಾಜಣ್ಣ (KN Rajanna) ಅವರು ಕ್ಯಾಬಿನೆಟ್‌ನಲ್ಲಿ ಹೇಳಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ನಮ್ಮ ಮೇಲೆ ಮಾತನಾಡೋದು ಸರಿನಾ? ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌