ಎರಡನೇ ಬಾರಿ ಹೋಗಿ ರಾಜಣ್ಣ ಕೈಗೆ ಸಿಕ್ಕಿ ಬಿದ್ದ ಹನಿಟ್ರ್ಯಾಪ್‌ ಅಸಾಮಿಗಳು!

ಬೆಂಗಳೂರು: ಸಹಕಾರಿ ಸಚಿವ ರಾಜಣ್ಣ (Rajanna) ಅವರ ಮನೆ ಬಳಿ ಎರಡನೇ ಬಾರಿ ಹೋದಾಗ ಹನಿಟ್ರ್ಯಾಪ್‌ (Honey Trap) ಅಸಾಮಿಗಳು ಸಿಕ್ಕಿ ಬಿದ್ದಿದ್ದಾರೆ.

ಹೌದು. ಜಯಮಹಲ್‌ನಲ್ಲಿರುವ ಸಹಕಾರ ಸಚಿವ ರಾಜಣ್ಣ ಅವರ ಸರ್ಕಾರಿ ನಿವಾಸಕ್ಕೆ ಮೊದಲ ಬಾರಿಗೆ ಹನಿಟ್ರ್ಯಾಪ್‌ ಗ್ಯಾಂಗ್‌ ಹೋಗಿದೆ. ಈ ವೇಳೆ ರಾಜಣ್ಣ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಎರಡನೇ ಬಾರಿ ಹೋದಾಗ ಅಸಲಿಯತ್ತು ತಿಳಿದು ರಾಜಣ್ಣ ಅವರನ್ನು ಲಾಕ್‌ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜಣ್ಣ ಇಬ್ಬರ ಬಳಿ ನಿಮ್ಮನ್ನು ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂದ ವ್ಯಕ್ತಿಗಳು ಹನಿಟ್ರ್ಯಾಪ್‌ ಮಾಡಲು ಹೇಳಿದವರ ಹೆಸರನ್ನು ತಿಳಿಸಿದ್ದಾರೆ. ವಿಚಾರಣೆ ವೇಳೆ ಆ ವ್ಯಕ್ತಿಗಳು ತಮಗೆ ನಿರ್ದೇಶನ ಕೊಟ್ಟ ವ್ಯಕ್ತಿಗಳ ಬಗ್ಗೆ ವಿವರ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ

6 ತಿಂಗಳಿನಿಂದ ಹನಿಟ್ರ್ಯಾಪ್‌ಗೆ ಪ್ಲ್ಯಾನ್‌ ಮಾಡಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಈ ಪ್ಲ್ಯಾನ್‌ ಕಾರ್ಯಗತಗೊಳಿಸಲು ತಂಡ ಮುಂದಾಗಿತ್ತು. ರಾಜಣ್ಣ ನಿವಾಸದಲ್ಲಿರುವ ಸಿಸಿಟಿವಿಯಲ್ಲಿ ಹನಿಟ್ರ್ಯಾಪ್‌ಗೆ ಬಂದವರು ಸೆರೆಯಾಗಿದ್ದಾರೆ. ಈ ದೃಶ್ಯ ತನಿಖೆಯಲ್ಲಿ ಮುಖ್ಯಪಾತ್ರವಹಿಸಲಿದೆ.

ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ರಾಜಣ್ಣ ಪುತ್ರ, ಕಾಂಗ್ರೆಸ್‌ ಪರಿಷತ್‌ ಸದಸ್ಯ ರಾಜೇಂದ್ರ, ಎರಡು ತಿಂಗಳಿಂದ ನಮ್ಮ ತಂದೆಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಅಲ್ಲದೇ 6 ತಿಂಗಳಿನಿಂದ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸದನದಲ್ಲಿ ಈಗಾಗಲೇ ನನ್ನ ತಂದೆಯವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಯತ್ನ ನಡೆದಿದೆ. ಇದು ರಾಜಕೀಯನಾ ಅಥವಾ ವೈಯಕ್ತಿಕನಾ ಎಂಬುದರ ಬಗ್ಗೆ ತನಿಖೆ ಆಗಬೇಕು. ಗೃಹ ಸಚಿವರು ನಮ್ಮ ಜಿಲ್ಲೆಯವರು. ಪರಮೇಶ್ವರ್‌ ಅವರ ಜೊತೆ ಮಾತನಾಡಿ ಈ ಬಗ್ಗೆ ದೂರು ನೀಡುತ್ತೇವೆ ಸರ್ಕಾರದಿಂದ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

 

ರಿವೀಲ್‌ ಆಗಿದ್ದು ಹೇಗೆ?
ಕಳೆದ 4 ದಿನಗಳಿಂದ ತಮಕೂರು ಮೂಲದ ರಾಜ್ಯದ ಪ್ರಭಾವಿ ಸಚಿವರ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ನಡೆದಿದೆ ಎಂಬ ವಿಚಾರ ಜೋರಾಗಿ ಚರ್ಚೆ ಆಗುತ್ತಿತ್ತು. ಆದರೆ ಯಾರು ಎನ್ನುವ ಬಗ್ಗೆ ಯಾರು ಅಧಿಕೃತವಾಗಿ ತಿಳಿಸಿರಲಿಲ್ಲ.

ಶುಕ್ರವಾರ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನೇರವಾಗಿಯೇ ಸಹಕಾರಿ ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

ಯತ್ನಾಳ್ ಪ್ರಸ್ತಾಪ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು. ಕರ್ನಾಟಕ ಸಿಡಿ, ಪೆನ್‌ಡ್ರೈವ್ ಗೆ ಫ್ಯಾಕ್ಟರಿ ಆಗಿದೆ. 48 ಮಂದಿಯ ಮೇಲೆ ಸಿಡಿ, ಪೆನ್‌ಡ್ರೈವ್ ಆಪರೇಷನ್ ಮಾಡಲಾಗಿದೆ. ಎಲ್ಲಾ ಪಕ್ಷದವರು ಇದರಲ್ಲಿ ಸಿಲುಕಿದ್ದಾರೆ. ಕೇಂದ್ರದ ಮುಖಂಡರೂ ಇದ್ದಾರೆ. ಇದರ ಹಿಂದಿರುವ ಪ್ರೊಡ್ಯೂಸರ್ ಯಾರು? ಡೈರೆಕ್ಟರ್ ಯಾರು ಎನ್ನುವುದು ಗೊತ್ತಾಗಬೇಕು. ಹೀಗಾಗಿ ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಸಚಿವ ರಾಜಣ್ಣ ಆಗ್ರಹಿಸಿದ್ದರು.

ರಾಜಣ್ಣ ಮಾತಿಗೆ ಪಕ್ಷಬೇಧ ಮರೆತು ಎಲ್ಲಾ ಪಕ್ಷಗಳಿಂದ ಬೆಂಬಲ ಸಿಕ್ಕಿತು. ತಕ್ಷಣವೇ ಗೃಹ ಸಚಿವರು ಕೂಡ ಉನ್ನತಮಟ್ಟದ ತನಿಖೆಗೆ ಆದೇಶ ನೀಡುವ ಘೋಷಣೆ ಮಾಡಿದರು.