ವಿಡಿಯೋ: ಮಾರುಕಟ್ಟೆಯಲ್ಲಿಯ ಮೋಸವನ್ನು ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ಡೀಲರ್ಸ್ ಹಲ್ಲೆ

ರಾಮನಗರ: ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮೋಸವನ್ನು ಪ್ರಶ್ನಿಸಿದ್ದಕ್ಕೆ ರೈತರೊಬ್ಬರ ಮೇಲೆ ಶುಕ್ರವಾರ ಡೀಲರ್ಸ್‍ಗಳು ಹಲ್ಲೆ ಮಾಡಿರುವ ಘಟನೆ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯ ರೈತ 63 ವರ್ಷದ ನಾಗಭೂಷಣ್ ಹಲ್ಲೆಗೊಳಗಾದ ರೈತ. 121 ಕೆಜಿ ರೇಷ್ಮೆಗೂಡು ಮಾರಾಟಕ್ಕೆ ತಂದಿದ್ದ ರೈತ ನಾಗಭೂಷಣ್ ಮಾರಾಟ ಮಾಡಿ ಹಣಕ್ಕಾಗಿ ಕುಳಿತಿದ್ರು. ವೇಳೆ ಪಕ್ಕದಲ್ಲಿಯೇ ರೈತರೊಬ್ಬರಿಗೆ ಡೀಲರ್ಸ್‍ಗಳಿಂದ ಆಗುತ್ತಿದ್ದ ಮೋಸವನ್ನ ಪ್ರಶ್ನಿಸಿದ್ದಾರೆ.

ಇದರಿಂದ ಕೋಪಗೊಂಡು ನಾಲ್ವರು ಡೀಲರ್ಸ್‍ಗಳು ನಾಗಭೂಷಣ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಡೀಲರ್ಸ್‍ಗಳು ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಲ್ಲೆಯಿಂದ ಉಸಿರಾಟದ ತೊಂದರೆಗೆ ಒಳಗಾಗಿರುವ ರೈತ ನಾಗಭೂಷಣ್ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ರೇಷ್ಮೆ ಮಾರುಕಟ್ಟೆಯಲ್ಲಿ ಡೀಲರ್ಸ್‍ಗಳು ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

https://www.youtube.com/watch?v=KD2ilqY3F3k

 

Comments

Leave a Reply

Your email address will not be published. Required fields are marked *