ಮಾರಾಟಕ್ಕಿದೆ `ಕಿರಿಕ್ ಪಾರ್ಟಿ’ಯ `ಕಾಂಟೆಸ್ಸಾ ಕಾರ್’!

ಬೆಂಗಳೂರು: ಕನ್ನಡದಲ್ಲಿ ಹಣ, ಕೀರ್ತಿ ಅಂತಾ ಸಖತ್ ಸುದ್ದಿ ಮಾಡಿದ ಸಿನಿಮಾ ಕಿರಿಕ್ ಪಾರ್ಟಿ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ನಾಯಕ ನಟನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಮಿಂಚಿದ್ದರೆ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ.

ಈ ಸಿನಿಮಾದಲ್ಲಿ ನಾಯಕ- ನಾಯಕಿಯಷ್ಟೇ ಮತ್ತೊಂದು ವಸ್ತು ಜನರ ಗಮನಸೆಳೆದಿದ್ದು, ಅದು ನಾಯಕ ನಟ ರಕ್ಷಿತ್ ಶೆಟ್ಟಿ ಓಡಿಸೋ ಓಪನ್ ಕಾರ್. ಪೋಸ್ಟರ್ ನಿಂದ ಹಿಡಿದು, ಹಾಡುಗಳಲ್ಲೂ ಈ ಕಾರು ಬಂದು ಹೋಗುತ್ತದೆ. ಈ ಹಳದಿ ಕಾಂಟೆಸ್ಸಾ ಕಾರನ್ನು ಇದೀಗ ಹರಾಜು ಹಾಕಲಾಗುತ್ತಿದೆಯಂತೆ.

ಸಿನಿಮಾದಲ್ಲಿ ಆ ಕಾರನ್ನು 4-5 ಮಂದಿ ಸ್ನೇಹಿತರು ಹಣ ಶೇರ್ ಮಾಡಿ ಖರೀದಿ ಮಾಡಿರುತ್ತಾರೆ. ನಂತ್ರ ನಾಯಕ ಕರ್ಣ ಆ ಕಾರನ್ನು ತನ್ನದಾಗಿ ಮಾಡ್ಕೊಂಡು ಕಡೆಯಲ್ಲಿ ಹರಾಜು ಮಾಡಿ, ಬಡ ಹುಡುಗಿಗೆ ಹಣ ನೀಡ್ತಾನೆ. ಇದೀಗ ಚಿತ್ರತಂಡವೂ ಕೂಡ ಅದೇ ಕೆಲಸಕ್ಕೆ ಕೈ ಹಾಕಿದೆ. ಸಮಾಜ ಸೇವೆಯ ಉದ್ದೇಶಕ್ಕಾಗಿಯೇ ನಿರ್ದೇಶಕ ರಿಷಬ್ ಶೆಟ್ಟಿ ಕಾರನ್ನು ಮಾರಾಟ ಮಾಡಲು ತಯಾರಿ ನಡೆಸಿದ್ದಾರಂತೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ `ಕಿರಿಕ್ ಕಾರಿ’ಗಾಗಿ ಅಂತಾ ಪ್ರತ್ಯೇಕ ಪೇಜ್ ಕೂಡ ಓಪನ್ ಆಗಿದೆ.

ಸಮಾಜದ ಏಳಿಗಾಗಿ ಸಿನಿಮಾದಲ್ಲಿ ಬಳಸಿದ ಕಾರು ಮಾರಾಟ ಮಾಡಿರುವುದು ಒಂದು ಶ್ಲಾಘನೀಯ ಕಾರ್ಯವಾಗಿದೆ.

Comments

Leave a Reply

Your email address will not be published. Required fields are marked *