ನಮ್ಮ ತೆರಿಗೆ ಹಣವನ್ನ ಉತ್ತರ ಭಾರತಕ್ಕೆ ಕೊಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

– ಕರ್ನಾಟಕ ಬಂದ್‌ ಮಾಡುವ ಅವಶ್ಯಕತೆಯಿಲ್ಲ ಎಂದ ಸಚಿವ

ಬೆಂಗಳೂರು: ಪ್ರತಿ ಬಾರಿ ತೆರಿಗೆ ಹಣ ಕಡಿತ ಮಾಡುತ್ತಿದ್ದಾರೆ. ನಮ್ಮ ಹಣವನ್ನ ಉತ್ತರ ಭಾರತಕ್ಕೆ (North India) ನೀಡುತ್ತಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾಡಿದ್ದಾರೆ.

ತೆರಿಗೆ (Tax) ಕಡಿತ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಣ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ. ಪ್ರತಿ ಬಾರಿ ರಾಜ್ಯಕ್ಕೆ ತೆರಿಗೆ ಕಡಿತ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ಶಿವರಾತ್ರಿಗೆ ಹೋದ್ರೆ ಪಕ್ಷದ ವಿರುದ್ಧ ಆಗುತ್ತಾ? : ಎಂ.ಬಿ ಪಾಟೀಲ್

ಡಿಕೆಶಿ ಸಾಫ್ಟ್ ಹಿಂದೂತ್ವ ವಿಚಾರ ಕುರಿತು ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್‌ ಈ ಹಿಂದಿನಿಂದಲೂ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಅದರಲ್ಲೇನೂ ಹೊಸದಿಲ್ಲ. ಇನ್ನೂ ಸದ್ಗುರು ಬಗ್ಗೆ ರಾಹುಲ್‌ ಗಾಂಧಿ ಅವರು ಮಾತನಾಡಿರುವುದು ನನಗೆ ಗೊತ್ತಿಲ್ಲ. ಹಾಗೇನಾದ್ರೂ ಮಾತನಾಡಿದ್ದರೆ, ಹೈಕಮಾಂಡ್‌ ಗಮನಿಸುತ್ತೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾರ್ಚ್‌ 22ರಂದು ಕರ್ನಾಟಕ ಬಂದ್‌ ವಿಚಾರ ಕುರಿತು ಮಾತನಾಡಿ, ಮುಖ್ಯಮಂತ್ರಿಗಳು ಶಾಂತಿಯುವಾಗಿ ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಮಟ್ಟದಲ್ಲಿ ಕೂಡ ಮಾತುಕತೆ ನಡೆಯುತ್ತಿದೆ, ಎಲ್ಲವೂ ಸರಿ ಹೋಗಲಿದೆ ಎಂದಿದ್ದಾರೆ. ಇದನ್ನೂ ಓದಿ:  ಮಾ.22 ಕರ್ನಾಟಕ ಬಂದ್ – ಪರೀಕ್ಷೆ ಮುಂದೂಡಿಕೆ ಇಲ್ಲ: ಮಧು ಬಂಗಾರಪ್ಪ

ನಮ್ಮ ಮೇಲೆ ಆರೋಪ ಮಾಡಬಹುದು, ಆದ್ರೆ ಇದು ಪೊಲೀಸ್ ಅಧಿಕಾರಿ ಮಾಡಿದ ತಪ್ಪು. ನಮ್ಮ ಜವಾಬ್ದಾರಿ ಅಲ್ಲ ಅದು ಪೊಲೀಸ್ ಜವಾಬ್ದಾರಿ. ನಾವು ಮಾಡಿದ ತಪ್ಪಿಲ್ಲ, ಕಂಡಕ್ಟರ್ ಮೇಲೆ ಹಾಕಿದ ಕೇಸ್‌ಗೆ ಇಷ್ಟು ದೊಡ್ಡದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಿದೆ. ಪೊಲೀಸ್ ನಮ್ಮ ಅಡಿಯಲ್ಲಿ ಕೆಲಸ ಮಾಡಬೇಕು ಅಂದಿಲ್ಲ, ಅಡಿಷನಲ್ ಕೇಸ್ ಹಾಕಿದ್ದು ತಪ್ಪು. ಮೇಲಿನ ಅಧಿಕಾರಿಗಳ ಮಾತು ಕೇಳಬೇಕಿತ್ತು. ಸದ್ಯ ಶಾಂತವಾಗಿದೆ, ಮತ್ತೆ ಕದಡಿಸುವುದು ಬೇಡ. ಬಂದ್ ಮಾಡಿದ್ರೆ ಬೆಳಗಾವಿ ನಗರಕ್ಕೆ ತೊಂದರೆ ಆಗುತ್ತೆ ಎಂದು ಸಚಿವರು ಹೇಳಿದ್ದಾರೆ.

ಇನ್ನೂ ಕೇಂದ್ರ ಸರ್ಕಾರ ಕ್ಷೇತ್ರಗಳ ಪುನರ್‌ವಿಂಗಡಣೆ ಕುರಿತು ಮಾತನಾಡಿ, ಕ್ಷೇತ್ರ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದಲ್ಲಿ ಕ್ಷೇತ್ರ ಕಡಿಮೆಯಾಗಲಿವೆ. ಅದರ ಬಗ್ಗೆ ಪ್ರತಿಭಟನೆ ಮಾಡಬೇಕಿದೆ. ನಮಗೆ ಕ್ಷೇತ್ರಗಳು ಹೆಚ್ಚಾಗಬೇಕು ಎಂದು ಆಗ್ರಹಿಸಿದ್ದಾರೆ.