ಮಂಡ್ಯ: ಜಿಲ್ಲೆಯಲ್ಲಿ ಕಳೆದ 30 ದಿನಗಳ ಅವಧಿಯಲ್ಲಿ ನಾಲ್ಕು ಕೊಂಡ ದುರಂತಗಳು ಸಂಭವಿಸಿದ್ದು, ಮತ್ತೊಂದು ಕೊಂಡ ಅವಘಡ ಸ್ವಲ್ಪದರಲ್ಲೇ ತಪ್ಪಿದೆ.
ನಾಗಮಂಗಲ ಪಟ್ಟಣದ ಬಡಗೊಡಮ್ಮ ದೇವಿಯ ಕೊಂಡೋತ್ಸವ ಇಂದು ಬೆಳಗ್ಗೆ ವೈಭವದಿಂದ ನೆರೆವೇರಿತು. ಕೊಂಡೋತ್ಸವದಲ್ಲಿ ಹಲವು ಭಕ್ತರು ಕೊಂಡವನ್ನ ಯಶಸ್ವಿಯಾಗಿ ಹಾದು ಹೋದರು. ಇದೇ ಸಂದರ್ಭದಲ್ಲಿ ಕೃಷ್ಣಪ್ಪ ಎಂಬ ಭಕ್ತ ತಲೆಯ ಮೇಲೆ ದೇವರ ವಿಗ್ರಹ ಹೊತ್ತು ಬಂದು, ಕೊಂಡ ಹಾಯಲು ಆರಂಭಿಸಿದ್ರು. ಆದ್ರೆ ಕೊಂಡ ಹಾಯುವಾಗ ಅರ್ಧ ದಾರಿ ಕ್ರಮಿಸಿದ ನಂತರ ಮುಗ್ಗರಿಸಿದಂತಾಗಿ, ತಲೆಯ ಮೇಲೆ ಹೊತ್ತಿದ್ದ ದೇವ್ರ ವಿಗ್ರಹ ಹಿಂದಕ್ಕೆ ವಾಲಿಕೊಳ್ತು.
ಇದನ್ನು ನೋಡಿದ ಭಕ್ತರಲ್ಲಿ ಕೃಷ್ಣಪ್ಪ ಎಲ್ಲಿ ಕೊಂಡದ ಒಳಗೆ ದೇವರ ವಿಗ್ರಹದ ಸಮೇತ ಬೀಳುತ್ತಾರೋ ಎಂಬ ಆತಂಕ ಮೂಡಿತ್ತು. ಆದ್ರೆ ಅಷ್ಟರಲ್ಲಿ ಸಾವರಿಸಿಕೊಂಡ ಕೃಷ್ಣಪ್ಪ ಯಶಸ್ವಿಯಾಗಿ ಕೊಂಡ ಹಾಯ್ದರು. ಕೊಂಡದಿಂದ ಹೊರಗೆ ಬಂದ ಕೃಷ್ಣಪ್ಪ ಅವರನ್ನು ಭಕ್ತರು ತಕ್ಷಣ ಹಿಡಿದುಕೊಂಡು ರಕ್ಷಿಸಿದ್ರು.
ಇದನ್ನೂ ಓದಿ: ಮಂಡ್ಯದಲ್ಲಿ ಅಗ್ನಿಕುಂಡಕ್ಕೆ ಬಿದ್ದು ಇಬ್ಬರು ಗಾಯ
https://www.youtube.com/watch?v=Ckj_8VUmWNY

Leave a Reply