ದಾಂಪತ್ಯ ಜೀವನಕ್ಕೆ ‘ಕಾಲಿಟ್ಟ’ ಸೀತಾರಾಮ ನಟಿ ಮೇಘನಾ ಶಂಕರಪ್ಪ

‘ಕಿನ್ನರಿ’, ‘ಸೀತಾರಾಮ’ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಮೇಘನಾ ಶಂಕರಪ್ಪ (Meghana Shankarappa) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಯಂತ್ (Jayanth) ಜೊತೆ ನಟಿ ಹಸೆಮಣೆ ಏರಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ:ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು- ಪತ್ನಿಗೆ ರಿಷಬ್ ಆ್ಯನಿವರ್ಸರಿ ವಿಶ್

ಫೆ.9ರಂದು ಜಯಂತ್ ಜೊತೆ ಮೇಘನಾ ಮದುವೆ ಬೆಂಗಳೂರಿನಲ್ಲಿ ಜರುಗಿದೆ. ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಸಂಭ್ರಮದಿಂದ ನಡೆದಿದೆ. ಕಾವ್ಯ ಶೈವ, ‘ಸೀತಾರಾಮ’ ಸೀರಿಯಲ್ ಟೀಮ್ ಸೇರಿದಂತೆ ಅನೇಕರು ಮದುವೆಗೆ (Wedding) ಹಾಜರಿ ಹಾಕಿದ್ದಾರೆ.

ಇನ್ನೂ ಇತ್ತೀಚೆಗೆ ಜಯಂತ್ ಜೊತೆ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ.