ಕುದುರೆ ಹಿಡಿದು ಓಡಿದ ವಿನೀಶ್‌ – ದರ್ಶನ್‌ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋ ನೋಡಿ

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ದರ್ಶನ್‌ಗೆ (Darshan) ಜಾಮೀನು (Bail) ಸಿಕ್ಕಿದ ಹಿನ್ನೆಲೆಯಲ್ಲಿ ರಿಲೀಫ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕುಟುಂಬದ ಜೊತೆ ಜ.14ರಂದು ಸಂಕ್ರಾಂತಿ ಹಬ್ಬ ಆಚರಿಸಿದ್ದರು. ಆಚರಣೆಯ ಸುಂದರ ಕ್ಷಣಗಳು ಹೇಗಿತ್ತು ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಒದ್ದಾಟ- ಆಸ್ಪತ್ರೆಗೆ ದಾಖಲು

ಇತ್ತೀಚೆಗೆ ಸಂಕ್ರಾಂತಿ ಹಬ್ಬ ದರ್ಶನ್ ಜೊತೆ ಆಚರಿಸಿದ್ದ ಫೋಟೋವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದರು. ದಿನಕರ್ ತೂಗುದೀಪ ಕುಟುಂಬ ಕೂಡ ಮೈಸೂರಿನಲ್ಲಿರುವ ದರ್ಶನ್ ಫಾರ್ಮ್ ಹೌಸ್‌ಗೆ ಆಗಮಿಸಿ ಹಬ್ಬ ಆಚರಿಸಿದ್ದರು.

ಜೋಡೆತ್ತುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರೆ ದರ್ಶನ್‌ ಮಗ ವಿನೀಶ್‌ ಕುದುರೆಯನ್ನು ಓಡಿಸಿ ಸಂಭ್ರಮಿಸಿದ್ದರು. ಈಗ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರ ಗಮನ ಸೆಳೆದಿದೆ. ಸಂಕ್ರಾಂತಿ ಹಬ್ಬ (Sankranti Festival) ಆಚರಿಸಿದ ರೀತಿ ಹೇಗಿತ್ತು? ಎಂಬುದರ ಝಲಕ್ ಡಿಬಾಸ್ ಫ್ಯಾನ್ಸ್ ಪೇಜ್‌ನಲ್ಲಿ ಸದ್ದು ಮಾಡುತ್ತಿದೆ.

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಂಚ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ‘ಡೆವಿಲ್’ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.