Lokayukta Raid | ಹುಟ್ಟುಹಬ್ಬದಂದು ಹಾಸ್ಟೆಲ್‌ನಲ್ಲಿ ಹೂಮಳೆ – ಅಂದು ವಾರ್ಡನ್‌, ಈಗ ಅಧಿಕಾರಿ

ಬಳ್ಳಾರಿ: ಲೋಕಾಯುಕ್ತ ಪೊಲೀಸರು (Lokayukta Police) ಬಳ್ಳಾರಿಯ ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಳ್ಳಾರಿಯ (Ballari) ರಾಮಾಂಜನೇಯ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವಾರ್ಡನ್‌ ಆಗಿ ನೇಮಕವಾಗಿದ್ದ ಲೋಕೇಶ್‌ ಈಗ ಬಿಸಿಎಂ (BCM) ಅಧಿಕಾರಿಯಾಗಿದ್ದಾರೆ. ಲೋಕೇಶ್ ಸರ್ಕಾರಿ ಕೆಲಸ ಮಾಡುತ್ತಿದ್ದರೂ ವರ್ಗಾವಣೆ ಮಾಡುವುದು, ಮಾಡಿಸುವುದೇ ಕಾಯಕ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.‌ ಇದನ್ನೂ ಓದಿ: 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾ ದಾಳಿ – ಯಾರ ಮೇಲೆ ದಾಳಿ?

 

ಲೋಕೇಶ್‌ ಹುಟ್ಟುಹಬ್ಬಕ್ಕೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಹೂವಿನ ಮಳೆ ಸುರಿಸುತ್ತಿದ್ದರು. ಹೂ ಮಳೆ ಸುರಿಸದೇ ಇದ್ದರೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದರು. ಕೇವಲ ವಿದ್ಯಾರ್ಥಿನಿಯರಷ್ಟೇ ಅಲ್ಲ, ಮಹಿಳಾ ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದರೂ ಎಂಬ ಗಂಭೀರ ಆರೋಪ ಈಗ ಕೇಳಿ ಬರುತ್ತಿದೆ.