ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

– ಕಾಂಗ್ರೆಸ್ ಅವಧಿಯಲ್ಲಿ 60% ಲಂಚ ತಲುಪಿದೆ, ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ

ಮೈಸೂರು: ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನಸಾಮಾನ್ಯರು. ಸಾರಿಗೆ ದರ ಏರಿಕೆ (Bus Ticket Price Hike) ಜನಸಾಮನ್ಯರಿಗೆ ಹೊರಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy)  ಕಿಡಿಕಾರಿದ್ದಾರೆ.

ಬಸ್ ಟಿಕೆಟ್ ದರ ಏರಿಕೆ ಕುರಿತು ಮೈಸೂರಿನಲ್ಲಿ (Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿಯನ್ನ ನಿಲ್ಲಿಸಲು ಕಾರಣ ಹುಡುಕುತ್ತಿದೆ. ಹೇಗಾದರು ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ. ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಂದಲೇ ಕಿತ್ತು ಅವರಿಗೆ ಕೊಡುವ ಕೆಲಸವನ್ನ ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಅತ್ತೆದನ್ನ ಅಳಿಯ ದಾನ ಮಾಡಿದ ಅನ್ನೋ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡೊಕೆ ಇವರೇ ಆಗಬೇಕಾ? ಬಸ್‌ನಲ್ಲಿ ಓಡಾಡುವವರೆಲ್ಲಾ ಜನಸಾಮಾನ್ಯರು. ದಿನಕ್ಕೆ 10 ರೂ. ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗುಜರಾತ್‌ನ ಪೋರಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು

ಕಾಂಗ್ರೆಸ್ ಅವಧಿಯಲಿ 60% ಲಂಚ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದ. ಈಗ ವಿಧಾನಸೌಧಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವಾ ಜಯತೇ ಎನ್ನುವ ಸಿದ್ದರಾಮಯ್ಯ ಆ ರೀತಿ ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರು ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ವಾ? ಇದನ್ನು ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭದ್ರತಾ ಪಡೆ ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿ – ಓರ್ವ ಸಿಬ್ಬಂದಿ ಸಾವು

ವಿರೋಧ ಪಕ್ಷವಾಗಿ ಬಿಜೆಪಿ ವಿಫಲ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನು ಹೇಳೋದು ನಾನಲ್ಲ. ಜನರು ಇದರ ಬಗ್ಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಎಲ್ಲಿ ಕಂಡ್ರೂ ಆವಾಜ್, ಬೇಸತ್ತು ಜೆಡಿಎಸ್ ಮುಖಂಡನ ಮರ್ಡರ್ – ಆರೋಪಿಗಳು ಅರೆಸ್ಟ್