ಸಿದ್ದರಾಮಯ್ಯ ದೇಶದಲ್ಲೇ 3ನೇ ಶ್ರೀಮಂತ ಸಿಎಂ – ನಂಬರ್‌ ಒನ್‌ ಯಾರು?

– ಮಮತಾ ಬ್ಯಾನರ್ಜಿ ಬಳಿ ಇರೋದು ಕೇವಲ 15 ಲಕ್ಷ ಮೌಲ್ಯದ ಆಸ್ತಿ

ನವದೆಹಲಿ: ದೇಶದಲ್ಲೇ ಅತಿ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೂರನೇ ಸ್ಥಾನದಲ್ಲಿದ್ದಾರೆ.

ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆ ಸರ್ವೆ ನಡೆಸಿದ್ದು, ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನಂಬರ್‌ 1 ಹಾಗೂ ಅರುಣಾಚಲ ಪ್ರದೇಶದ ಪೆಮಾ ಖಂಡು ಅವರು ನಂಬರ್‌ 2 ಶ್ರೀಮಂತ ಸಿಎಂ ಗಳಾಗಿದ್ದಾರೆ.

ಆಂಧ್ರ ಸಿಎಂ 931 ಕೋಟಿ ಹಾಗೂ ಅರುಣಾಚಲ ಪ್ರದೇಶದ ಸಿಎಂ 332 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 3ನೇ ಸ್ಥಾನದಲ್ಲಿರುವ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಬಳಿ 51 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (15 ಲಕ್ಷ), ಜಮ್ಮು-ಕಾಶ್ಮೀರದ ಸಿಎಂ ಓಮರ್‌ ಅಬ್ದುಲ್ಲಾ (55 ಲಕ್ಷ), ಕೇರಳದ ಸಿಎಂ ಪಿಣರಾಯಿ ವಿಜಯನ್‌ 1.18 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ದೇಶದಲ್ಲೇ ಅತಿ ಕಡಿಮೆ ಆಸ್ತಿ ಹೊಂದಿರುವ ಸಿಎಂಗಳಾಗಿದ್ದಾರೆ.

ಸಿದ್ದರಾಮಯ್ಯ ಅವರು 23 ಕೋಟಿ ಸಾಲ ಹೊಂದಿದ್ದಾರೆ. ಪೆಮಾ ಖಂಡು 180 ಕೋಟಿ ಹಾಗೂ ನಾಯ್ಡು 10 ಕೋಟಿ ಸಾಲ ಹೊಂದಿದ್ದಾರೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂ. ಎಂದು ಸಂಸ್ಥೆ ವರದಿ ತಿಳಿಸಿದೆ.