ಮೂರೇ ದಿನದಲ್ಲಿ ದಾಖಲೆಯ ಸೇಲ್ ಆದ ನಂದಿನಿ ದೋಸೆ, ಇಡ್ಲಿ ಹಿಟ್ಟು

ಬೆಂಗಳೂರು: ನಂದಿನಿ ದೋಸೆ ಇಡ್ಲಿ ಹಿಟ್ಟಿಗೆ (Nandini Dosa, Idli Batter) ಬೆಂಗಳೂರಿಗರು (Bengaluru) ಫಿದಾ ಆಗಿದ್ದಾರೆ. ಗ್ರಾಹಕರು ಭರ್ಜರಿ ರೆಸ್ಪಾನ್ಸ್ ಮಾಡುತ್ತಿದ್ದು, ಮೂರೇ ದಿನದಲ್ಲಿ ದಾಖಲೆಯ ಸೇಲ್ ಆಗಿದೆ.

ಕಳೆದ ಎರಡು ಮೂರು ದಿನದಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ, ದೋಸೆ ಹಿಟ್ಟು ಸೇಲ್ ಆಗಿದೆ. 5% ವೇ ಪ್ರೋಟೀನ್ ಇರೋದ್ರಿಂದ ಜನ ಖುಷಿಯಿಂದ ಖರೀದಿಗೆ ಬರ್ತಿದ್ದಾರೆ. ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೆ ಬಂದು ಕೇಳಿ ಖರೀದಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹಿಟ್ಟು ಸರಬರಾಜು ಮಾಡಲು ಕೆಎಂಎಫ್ (KMF) ಮುಂದಾಗಿದೆ ಎನ್ನಲಾಗಿದೆ.

ಇಡ್ಲಿ ಹಿಟ್ಟು ವಿತರಣೆಗೆ ಈಗ 5-6 ವಾಹನಗಳು ಇವೆ. ಶೀಘ್ರದಲ್ಲಿಯೇ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದ್ದು ಜನರ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೂ ಚಿಂತನೆ ನಡೆಸಲಾಗಿದೆ.‌

ಹಾಲು ಮೊಸರಿನಂತೆ ನಂದಿನಿ ದೋಸೆ ಇಡ್ಲಿ, ಹಿಟ್ಟು ಕೂಡ ಜನರ ಫೇವರಿಟ್ ಆಗುತ್ತಿದೆ. ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದರಿಂದ ಬೇರೆ ಜಿಲ್ಲೆಗಳಿಗೂ ಶೀಘ್ರದಲ್ಲಿಯೇ ವಿಸ್ತರಿಸಲು ಕೆಎಂಎಫ್ ನಿರ್ಧರಿಸಿದೆ.