ತಬ್ಬಿ ಸಮಾಧಾನ ಹೇಳಿದ ಕೊಹ್ಲಿ – ಅಶ್ವಿನ್‌ ನಿವೃತ್ತಿ ಹೇಳ್ತಾರಾ?

ಬ್ರಿಸ್ಪೇನ್‌: ಡ್ರೆಸ್ಸಿಂಗ್‌ ರೂಮಿನಲ್ಲಿ ವಿರಾಟ್‌ ಕೊಹ್ಲಿ (Virat Kohli) ಅಶ್ವಿನ್‌ (Ashwin) ಅವರನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಅಶ್ವಿನ್‌ ಯಾವುದೋ ಗಂಭೀರ ವಿಚಾರದ ಬಗ್ಗೆ ಕೊಹ್ಲಿ ಜೊತೆ ಮಾತನಾಡಿದ್ದಾರೆ. ಮಾತನಾಡುವ ಸಮಯದಲ್ಲಿ ಅಶ್ವಿನ್‌ ಭಾವುಕರಾಗಿದ್ದಾರೆ. ಈ ವೇಳೆ ವಿರಾಟ್‌ ಕೊಹ್ಲಿ ತಬ್ಬಿ ಸಮಾಧಾನ ಹೇಳಿದ್ದಾರೆ.

 

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ ಅಭಿಮಾನಿಗಳು ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಾರಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಅಶ್ವಿನ್‌ 106 ಟೆಸ್ಟ್‌ ಪಂದ್ಯವನ್ನು ಆಡಿದ್ದು 537 ವಿಕೆಟ್‌ ಪಡೆದಿದ್ದಾರೆ.