ದುಬೈನ ಬುರ್ಜ್ ಖಲೀಫಾ ಬಳಿಯ ಕಟ್ಟಡದಲ್ಲಿ ಅಗ್ನಿ ಅವಘಡ

ನವದೆಹಲಿ: ದುಬೈನ ಬುರ್ಜ್ ಖಲೀಫಾದ ಸಮೀಪವಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ.

ನಿರ್ಮಾಣ ಹಂತದಲ್ಲಿರೋ ಈ 60 ಅಂತಸ್ತಿನ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅಂತಾ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಕಟ್ಟಡದಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದ್ದು ಅದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಲೆಫ್ಟಿನೆಂಟ್ ಕೊಲೋನಲ್ ಅಹ್ಮದ್ ಅತೀಜ್ ದುಬೈ ಮಾಧ್ಯಮಮವೊಂದಕ್ಕೆ ತಿಳಿಸಿದ್ದಾರೆ.

ಬುರ್ಜ್ ಖಲೀಫಾ ಸಮೀಪದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ಇದು ಮೊದಲಲ್ಲ. 2015ರಲ್ಲಿ ಹೊಸ ವರ್ಷದಂದು ಇಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ಅಗ್ನಿ ದುರಂತ ಸಂಭವಿಸಿ 16 ಮಂದಿಗೆ ಗಾಯಗಳಾಗಿತ್ತು.

Comments

Leave a Reply

Your email address will not be published. Required fields are marked *