ದಾವಣಗೆರೆ: ಹಸುವೊಂದು ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿರುವ ಘಟನೆ ಕೆಟಿಜೆ ನಗರದಲ್ಲಿ ನಡೆಯುತ್ತಿದೆ.
ಹಲವು ದಿನಗಳಿಂದ ಹಸು ಹೀಗೆ ಹಾಲು ಕುಡಿಯುವುದನ್ನು ನೋಡಿದ ಜನರು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ.
ಕರು ಇಲ್ಲದ ಕಾರಣ ಕೆಚ್ಚಲ ಭಾರವನ್ನು ಇಳಿಸಿಕೊಳ್ಳಲು ಹಸು ತನ್ನ ಹಾಲನ್ನು ತಾನೇ ಕುಡಿಯುತ್ತಿದೆ. ಅಷ್ಟೇ ಅಲ್ಲದೇ ಹಸು ತನ್ನ ಹಾಲನ್ನು ತಾನೇ ಕುಡಿಯುತ್ತಿರುವ ದೃಶ್ಯವನ್ನು ಇದೂವರೆಗೂ ನಾವು ನೋಡೇ ಇಲ್ಲ ಜನ ಹೇಳಿದ್ದಾರೆ.
ಈ ರೀತಿಯಾಗಿ ಹಸು ತನ್ನ ಹಾಲನ್ನು ಕೆಲ ದಿನಗಳಿಂದ ಕುಡಿಯುತ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.
https://www.youtube.com/watch?v=ywu0idu64qc

Leave a Reply