ನಾರಿಮಣಿಯರ ಮನಗೆದ್ದ ಕಲರ್ ಜೀನ್ಸ್ ಪ್ಯಾಂಟ್- ಹೆಚ್ಚಾಯ್ತು ಬೇಡಿಕೆ

ಬ್ಲ್ಯಾಕ್, ಬ್ಲ್ಯೂ ಸೇರಿದಂತೆ ನಾಲ್ಕೈದು ಕಲರ್‌ಗಳಿಗೆ ಮಾತ್ರ ಸೀಮಿತವಾಗಿದ್ದ, ಕಲರ್ ಜೀನ್ಸ್ ಪ್ಯಾಂಟ್‌ಗಳು ಇದೀಗ ಕಾಲೇಜು ಹುಡುಗಿಯರನ್ನು ಆಕರ್ಷಿಸುತ್ತಿವೆ. ಕೆಪ್ರಿಸ್, ಲೋ -ವೇಸ್ಟ್, ಸ್ಕಿನ್ನಿ, ಸ್ಲಿಮ್‌ಫಿಟ್, ಕಾರ್ಗೋಸ್‌ನ ಕಲರ್ ಜೀನ್ಸ್ ಪ್ಯಾಂಟ್‌ಗಳು (Jeans Pant) ನಾನಾ ಬಣ್ಣಗಳಲ್ಲಿ ಬಿಡುಗಡೆಗೊಂಡಿವೆ. ಇನ್ನು, ಇವುಗಳಲ್ಲಿ ಬೂಟ್ ಕಟ್, ನ್ಯಾರೋ ಕಟ್, ಸ್ಟೈಟ್ ಕಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಇದನ್ನೂ ಓದಿ:ತಿಮ್ಮಪ್ಪನ ದೇವಸ್ಥಾನದಲ್ಲಿ ಮದುವೆ ಸುದ್ದಿ ಖಚಿತಪಡಿಸಿದ ಕೀರ್ತಿ ಸುರೇಶ್

ಕ್ಯಾಶುವಲ್ ಲುಕ್‌ಗಾಗಿ ಜೀನ್ಸ್ ಪ್ಯಾಂಟ್ ಧರಿಸುವವರು ಹೆಚ್ಚು. ಕಾರಣ, ಈ ಪ್ಯಾಂಟ್‌ಗಳಿಗೆ ಶಾರ್ಟ್ ಕ್ರಾಪ್ ಟಾಪ್‌ನಿಂದಿಡಿದು, ಪುಲ್ ಓವರ್, ಜಾಕೆಟ್ಸ್, ಸ್ವೆಟರ್ಸ್, ಸ್ಕಾರ್ಫ್, ಸ್ಟೊಲ್ಸ್, ಮಫ್ಲರ್ಸ್, ಕೋಟ್, ಕುರ್ತಾ ಹೀಗೆ ಎಲ್ಲವನ್ನು ಮಿಕ್ಸ್ ಮ್ಯಾಚ್ ಮಾಡಲು ಸಾಧ್ಯವಾಗುವುದು. ಇನ್ನು, ಇದೀಗ ಟ್ರೆಂಡಿಯಾಗಿರುವ ಕಲರ್ ಜೀನ್ಸ್ ಪ್ಯಾಂಟ್‌ಗಳಿಗಂತೂ ನಾನಾ ಬಗೆಯಲ್ಲಿ ಮ್ಯಾಚ್ ಮಾಡಿ ಧರಿಸಬಹುದು. ಇದು ನಯಾ ಲುಕ್ ನೀಡುತ್ತದೆ.

ಇಂದು ಕಲರ್ ಜೀನ್ಸ್ ಪ್ಯಾಂಟ್‌ಗಳು ಯಾವ ಮಟ್ಟಿಗೆ ಜಾದೂ ಮಾಡಿವೆ ಎಂದರೆ, ಬೆಂಗಳೂರು ಹುಡುಗಿಯರು ಮಾತ್ರವಲ್ಲ, ಚಿಕ್ಕ-ಪುಟ್ಟ ಪಟ್ಟಣಗಳ ಟೀನೇಜ್ ಹುಡುಗಿಯರು, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಕೂಡ ಧರಿಸಲಾರಂಭಿಸಿದ್ದಾರೆ.

ಪಾಸ್ಟೆಲ್ ಶೆಡ್ಸ್‌ನವು ಹಳದಿ, ಮಿಂಟ್ ಗ್ರೀನ್, ಬೂದು, ತಿಳಿ ಗುಲಾಬಿ, ಕೆಂಪು, ನಿಯಾನ್ ವರ್ಣದ ಜೀನ್ಸ್ ಪ್ಯಾಂಟ್‌ಗಳು ಇಂದು ಬೇಡಿಕೆ ಪಡೆದುಕೊಂಡಿವೆ. ಮೊದಲೆಲ್ಲಾ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಇವು ಇದೀಗ ಲೋಕಲ್ ಬ್ರಾಂಡ್‌ಗಳಲ್ಲೂ ದೊರೆಯುತ್ತಿವೆ.

ಫ್ಯಾಷನ್ ಟಿಪ್ಸ್:

  • ಬ್ರಾಂಡೆಡ್ ಕಲರ್ ಜೀನ್ಸ್ ಪ್ಯಾಂಟ್‌ಗೆ ಆದ್ಯತೆ ನೀಡಿ. ಯಾಕೆಂದರೆ, ಇವುಗಳ ಬಣ್ಣ ಮಾಸದು.
  • ಕಳಪೆ ಗುಣಮಟ್ಟದ ಕಲರ್ ಜೀನ್ಸ್ ಪ್ಯಾಂಟ್ ಧರಿಸುವುದರಿಂದ ಚರ್ಮ ಅಲರ್ಜಿಗೆ ಒಳಗಾಗಬಹುದು.
  • ಬ್ಲಾಕ್, ಡಾರ್ಕ್ ನೇವಿ ಬಣ್ಣದ ಪ್ಯಾಂಟ್‌ಗಳು ಕುಳ್ಳಗಿರುವ ಕಾಲುಗಳನ್ನು ಉದ್ದನಾಗಿರುವಂತೆ ಬಿಂಬಿಸುತ್ತವೆ.
  • ರೆಗ್ಯುಲರ್ ರೈಸ್ ಕಲರ್ ಜೀನ್ಸ್ ಪ್ಯಾಂಟ್ ಬೆಸ್ಟ್ ಆಯ್ಕೆ.
  • ಕಚೇರಿಗೆ ಬಿಗಿಯಾದ ಕಲರ್ ಕಲರ್ ಜೀನ್ಸ್ ಆಯ್ಕೆ ಬೇಡ. ಕಾಲು ಸೆಳೆತ ಉಂಟಾಗಬಹುದು.