800 ರೂಪಾಯಿಗೆ ಉಗ್ರರರನ್ನು ಗಡಿ ದಾಟಿಸಿದ್ದ ಉಗ್ರ ಹಬೀಬ್ ಮಿಯಾ

ಬೆಂಗಳೂರು: ಕೇವಲ 800 ರೂಪಾಯಿಗೆ ಉಗ್ರರರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡಿ ದಾಟಿಸಿದ್ದೇನೆ ಎನ್ನುವ ಸ್ಫೋಟಕ ಮಾಹಿತಿಯನ್ನು ಉಗ್ರ ಹಬೀಬ್ ಮಿಯಾ ಹೊರಹಾಕಿದ್ದಾನೆ.

ಕಳೆದ 10 ದಿನಗಳಿಂದ ಸಿಸಿಬಿ ಪೊಲೀಸರು ಹಬೀಬ್ ವಿಚಾರಣೆ ಮಾಡುತ್ತಿದ್ದಾರೆ. ಈತ 800 ರೂಪಾಯಿಗಾಗಿ ಉಗ್ರರಿಗೆ ಭಾರತದ ಗಡಿ ಮಾಹಿತಿ ನೀಡಿದ್ದೇನೆ ಎನ್ನುವ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.

2005 ರಲ್ಲಿ ಐಐಎಸ್‍ಸಿ (ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್) ಮೇಲೆ ದಾಳಿ ಮಾಡಿದ್ದ 37 ವರ್ಷದ ಹಬೀಬ್ ಮಿಯಾನನ್ನು ಮಾರ್ಚ್ 18 ರಂದು ಬಂಧಿಸಲಾಗಿತ್ತು. ತ್ರಿಪುರದ ಅಗರ್ತಲ ನಗರ ಹೊರವಲಯದ ಜೋಗೇಂದ್ರ ನಗರದಲ್ಲಿ ಹಬೀಬ್ ಮಿಯಾನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಈ ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರಿಗೆ ತ್ರಿಪುರ ಪೊಲೀಸರು ನೆರವು ನೀಡಿದ್ದರು. ನಂತರ ಬೆಂಗಳೂರು ಸಿಸಿಬಿ ಪೆÇಲೀಸರು ಹಬೀಬ್‍ನನ್ನು ವಶಕ್ಕೆ ಪಡೆದಿದ್ದರು.

2005ರ ಡಿಸೆಂಬರ್ 28ರಂದು ನಡೆದ ಐಐಎಸ್‍ಸಿ ದಾಳಿಯಲ್ಲಿ ನಿವೃತ್ತ ಗಣಿತ ಪ್ರೊಫೆಸರ್ ಮುನೀಷ್ ಚಂದ್ರ ಪುರಿ ಸಾವನ್ನಪ್ಪಿದ್ದರು. ಅಲ್ಲದೆ ಈ ಘಟನೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದರು.

Comments

Leave a Reply

Your email address will not be published. Required fields are marked *