ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Hariprriya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ನಟಿ ಬೇಬಿ ಬಂಪ್ (Baby Bump) ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಜೊತೆ ನಿಂತು ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

ಫೋಟೋಶೂಟ್‌ಗೆ ಕನ್ನಡ ಹಬ್ಬದ ಸಲುವಾಗಿ.. ನಾವು ಎಂದು ಹರಿಪ್ರಿಯಾ ದಂಪತಿ ಕ್ಯಾಪ್ಷನ್ ನೀಡಿದ್ದಾರೆ. ನಟಿ ಕೆಂಪು ಬಣ್ಣದ ಚೂಡಿದಾರ್‌ನಲ್ಲಿ ಮಿಂಚಿದ್ದಾರೆ. ಪತ್ನಿಯ ಬೇಬಿ ಬಂಪ್ ಹಿಡಿದು ವಸಿಷ್ಠ ಪೋಸ್ ನೀಡಿದ್ದಾರೆ. ಅವರು ಹಳದಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಈ ಫೋಟೋಶೂಟ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

 

View this post on Instagram

 

A post shared by Hariprriya Simha (@iamhariprriya)

ಅಂದಹಾಗೆ, ಹರಿಪ್ರಿಯಾ ಮತ್ತು ವಸಿಷ್ಠ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ಮದುವೆಯಾದರು. ಈ ಮದುವೆಗೆ ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ಶಿವಣ್ಣ ಸೇರಿದಂತೆ ಹಲವು ಭಾಗಿಯಾಗಿ ವಸಿಷ್ಠ ದಂಪತಿಗೆ ಶುಭಕೋರಿದ್ದರು.