ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಕಲ್ಲಾಸ್‌

ಬೈರೂತ್‌: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ದಟ್ಟವಾಗಿ ಆವರಿಸಿದೆ. ಪ್ಯಾಲೆಸ್ತೀನ್‌ (Palestine) ವಿರುದ್ಧ ಸಮರ ಸಾರಿರುವ ಇಸ್ರೇಲ್ (Israel) ನೆರೆಯ ಲೆಬನಾನ್ (Lebanon) ಮೇಲೂ ದಾಳಿ ಮಾಡುತ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದ ಮೇಲೆ ಗುಂಡಿನ ದಾಳಿ – ಕಿಡಿಗೇಡಿಗಳಿಗೆ ಶೋಧ

ಎರಡು ದಿನಗಳ ಹಿಂದೆಯಷ್ಟೇ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಬೈರೂತ್‌ ನಗರದ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಭಾನುವಾರ (ನ.17) ಸಿರಿಯನ್ ಬಾತ್ ಪಕ್ಷದ ಲೆಬನಾನ್‌ನ ಶಾಖೆಯನ್ನು ಗುರಿಯಾಗಿಸಿಕೊಂಡು ಮಧ್ಯ ಬೈರೂತ್‌ ನಗರದ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಹಿಜ್ಬುಲ್ಲಾದ ಮುಖ್ಯ ವಕ್ತಾರ (Hezbollah Spokesman)ಮೊಹಮ್ಮದ್ ಅಫೀಫ್‌ನನ್ನು ಹತ್ಯೆಗೈದಿದೆ ಎಂದು ಲೆಬನಾನಿನ ಭದ್ರತಾ ಪಡೆಯ ಮೂಲಗಳು ತಿಳಿಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

ಎರಡು ದಿನಗಳ ಹಿಂದೆಯಷ್ಟೇ ಇಸ್ರೇಲ್‌ ಬೈರೂತ್‌ ಮೇಲೆ ವಾಯು ದಾಳಿ ನಡೆಸಿ 12 ಜನರನ್ನು ಹತ್ಯೆಗೈದಿತ್ತು. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

ಮತ್ತೆ ಉದ್ವಿಗ್ನಗೊಂಡಿದ್ದೇಕೆ?
ಒಂದು ವಾರದ ಹಿಂದೆಯಷ್ಟೇ ಹಿಜ್ಬುಲ್ಲಾ ಉಗ್ರರ ಗುಂಪು ಇಸ್ರೇಲ್‌ನ ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್‌ಗಳಿಂದ ದಾಳಿ ನಡೆಸಿತ್ತು. ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಅನೇಕ ನಾಗರಿಕರು ಗಾಯಗೊಂಡಿದ್ದರು. ಇದರಿಂದ ಕೆರಳಿದ ಇಸ್ರೇಲ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ