ಈ ಆನೆಗೆ ಸೊಂಡಿಲಿಗಿಂತ ದಂತಗಳೇ ಉದ್ದ- ನಾಗರಹೊಳೆಯಲ್ಲಿ ಅಪರೂಪದ ಆನೆ ಪ್ರತ್ಯಕ್ಷ

ಮೈಸೂರು: ಸಾಮಾನ್ಯವಾಗಿ ಅನೆಗಳ ದಂತಗಳು ಸೊಂಡಿಲಿಗಿಂತ ಚಿಕ್ಕದಾಗಿರುತ್ತವೆ. ಕೆಲ ಪ್ರದೇಶಗಳಲ್ಲಿ ಸೊಂಡಿಲಿಗಿಂತ ದಂತಗಳು ಉದ್ದವಿರುವ ಆನೆಗಳನ್ನು ಕಾಣುತ್ತೇವೆ. ಆಶ್ಚರ್ಯ ಎನ್ನುವಂತೆ ಮೈಸೂರು ಜಿಲ್ಲೆಯ ಒಡಲಲ್ಲಿ ಇರುವ ನಾಗರಹೊಳೆಗೆ ಅರಣ್ಯ ಪ್ರದೇಶದ ಅಂತರಸಂತೆ ಪ್ರದೇಶದಲ್ಲಿ ಇಂತಹ ಅಪರೂಪದ ಆನೆ ಪತ್ತೆಯಾಗಿದೆ.

ಸೊಂಡಿಲಿಗಿಂತ ದಂತ ಉದ್ದ ಇರುವ ಆನೆ ಪ್ರತ್ಯಕ್ಷವಾಗಿ ತನ್ನ ದರ್ಶನವನ್ನು ನೀಡಿದೆ. ಸುಮಾರು 57 ವರ್ಷ ವಯಸ್ಸಿನ ಈ ಆನೆಗೆ ಸುಮಾರು ಎರಡು ಮೀಟರ್ ಉದ್ದವಿರುವ ದಂತ ಬೆಳೆದಿದೆ. ಇದರಿಂದ ಆನೆಗೆ ಜೋರಾಗಿ ನಡೆಯುವುದಕ್ಕೂ ಆಗುತ್ತಿಲ್ಲ. ಅಲ್ಲದೆ ಆಹಾರವನ್ನು ಸಲೀಸಾಗಿ ತಿನ್ನುವುದಕ್ಕೆ ಆಗುತ್ತಿಲ್ಲ.

ಈ ರೀತಿಯ ಆನೆಗಳು ಸುಮಾರು 70 ವರ್ಷಗಳು ಬದುಕುತ್ತವೆ. ಆ ವೇಳೆಗಾಗಲಿ ಈ ಆನೆಗೆ ದಂತ ಇನ್ನು ಉದ್ದ ಬೆಳೆದು ಆನೆಗೆ ಕಷ್ಟ ಹೆಚ್ಚಾಗಬಹುದು. ಒಂದು ವೇಳೆ ಈ ರೀತಿ ಆದರೆ ಕೇಂದ್ರದ ವನ್ಯ ಜೀವಿ ಸಂರಕ್ಷಣಾ ಅಧಿಕಾರಿಗಳ ಒಪ್ಪಿಗೆ ಮೇರೆಗೆ ದಂತವನ್ನು ಕತ್ತರಿಸಲು ಅರಣ್ಯ ಇಲಾಖೆ ಮುಂದಾಗುತ್ತದೆ.

https://www.youtube.com/watch?v=0bSEfBg99Vc

 

Comments

Leave a Reply

Your email address will not be published. Required fields are marked *