MUDA Case: ಇಂದು ಮೈಸೂರು ‘ಲೋಕಾ’ ಕಚೇರಿಯಲ್ಲಿ ಸಿಎಂ ವಿಚಾರಣೆ

ಬೆಂಗಳೂರು: ಮುಡಾ ನಿವೇಶವನ್ನು ಅಕ್ರಮವಾಗಿ ಪಡೆದ ಪ್ರಕರಣದಲ್ಲಿ ಎ.1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಿಂದ ಬೆಳಗ್ಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಪ್ರಯಾಣ ಬೆಳಸಿದ್ದಾರೆ. 10 ಗಂಟೆ ಬಳಿಕ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆಗೆ ಒಳಗಾಗಲಿದ್ದಾರೆ.

ಎಸ್‌ಪಿ ಉದೇಶ್‌ ನೇತೃತ್ವದಲ್ಲಿ ಸಿಎಂ ವಿಚಾರಣೆ ಎದುರಿಸಲಿದ್ದಾರೆ. ಮುಡಾ ಕೇಸ್‌ ಸಂಬಂಧ ಈಗಾಗಲೇ ಪ್ರಶ್ನೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದಾರೆ.

ಮುಡಾ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ, ಬಾಮೈದ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜ್‌ ಅವರ ವಿಚಾರಣೆ ಆಗಿದೆ. ಇಂದು ಸಿದ್ದರಾಮಯ್ಯ ಅವರ ವಿಚಾರಣೆ ನಡೆಯಲಿದೆ.