Uttar Pradesh| ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ- ಇಬ್ಬರು ಮಕ್ಕಳು ಸಾವು

ಲಕ್ನೋ: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಡಾಲ್‌ಹಾಟ್‌ನ ನಾರಾಯಣಪುರ ಬಜಾರ್ ರೈಲು ನಿಲ್ದಾಣದ ಬಳಿ ನಡೆದಿದೆ.

ಮಿರ್ಜಾಪುರದ (Mirzapur) ಅಡಾಲ್‌ಹಾಟ್ ಪ್ರದೇಶದ ನಾರಾಯಣಪುರ ಬಜಾರ್ ರೈಲು ನಿಲ್ದಾಣದ ಬಳಿ ಇಬ್ಬರು ಮಕ್ಕಳು ಇಂದು ಸಂಜೆ ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಂಗೆ ಯಾವ ರೀತಿ ಸಂಬೋಧಿಸಬೇಕು ಎಂಬುದು ಸಿಎಂ ಮರೆತಿದ್ದಾರಂದ್ರೆ, ಇದು ದುರ್ದೈವದ ಸಂಗತಿ- ಬೊಮ್ಮಾಯಿ

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಒಪಿ ಸಿಂಗ್ ಮಾತನಾಡಿ, ಮೃತರನ್ನು ಸತ್ಯಂ (8) ಮತ್ತು ರಾಮ್ ಆಶಿಶ್ (10) ಎಂದು ಗುರುತಿಸಲಾಗಿದೆ. ಇಬ್ಬರೂ ಅಡಾಲ್‌ಹತ್ ಪ್ರದೇಶದ ಬರೈಪುರ ನಿವಾಸಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಗೆ ಕಲುಷಿತ ನೀರು ಪೂರೈಕೆ – ಸಿಎಂ ಮನೆ ಮುಂದೆ ಕೊಳಕು ನೀರು ಸುರಿದ ಸ್ವಾತಿ ಮಲಿವಾಲ್

ಘಟನೆಯ ಬಗ್ಗೆ ಮಾಹಿತಿ ಪಡೆದು ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಟ್ಟು ನಿಂತ ಕಾರಿಗೆ ಲಾರಿ ಡಿಕ್ಕಿ – ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ