ರಕ್ತಪಾತದ ಲವ್ ಸ್ಟೋರಿ ಹೇಳೋಕೆ ಸಜ್ಜಾದ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಹುಭಾಷೆಗಳಲ್ಲಿ ಭಾರೀ ಬೇಡಿಕೆಯಿದೆ. ಪುಷ್ಪ, ಅನಿಮಲ್ ಸಿನಿಮಾಗಳ ಸಕ್ಸಸ್ ನಂತರ ರಶ್ಮಿಕಾಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದೀಗ ಅವರು ಮತ್ತೊಂದು ಬಾಲಿವುಡ್ (Bollywood) ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ರಕ್ತಪಾತದ ಲವ್ ಸ್ಟೋರಿ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ ಮದುವೆಯಾದ ‘ಲವ್‌ ಮಾಕ್ಟೈಲ್‌ 2’ ನಟಿ ರೆಚೆಲ್ ಡೇವಿಡ್

‘ಸ್ತ್ರೀ 2’ ಸಿನಿಮಾ ನಿರ್ಮಾಣ ಮಾಡಿದ್ದ ಸಂಸ್ಥೆ ಈಗ ‘ಥಾಮಾ’ (Thama) ಎಂಬ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿರೋದು ಅಧಿಕೃತವಾಗಿ ಘೋಷಣೆ ಆಗಿದೆ. ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸೋದರ ಜೊತೆಗೆ ರಕ್ತಪಾತದ ಲವ್ ಸ್ಟೋರಿಯನ್ನು ನಟಿ ಹೇಳಲಿದ್ದಾರೆ.

 

View this post on Instagram

 

A post shared by Maddock Films (@maddockfilms)

44 ಸೆಕೆಂಡ್‌ಗಳ ಶೀರ್ಷಿಕೆ ಅನಾವರಣದ ಟೀಸರ್ ಝಲಕ್ ಬಿಡುಗಡೆ ಆಗಿದ್ದು, ಆದಿತ್ಯಾ ಸರ್ಪೋತದಾರ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸ್ತ್ರೀ, ಭೇಡಿಯ, ಮುಂಜ್ಯಾ, ಸ್ತ್ರೀ 2 ಸಿನಿಮಾ ಮಾಡಿದ್ದ ನಿರ್ಮಾಪಕರು ಈಗ ಲವ್ ಸ್ಟೋರಿಯೊಂದಿಗೆ ಬರುತ್ತಿದ್ದಾರೆ. ಇದೂ ಕೇವಲ ಪ್ರೇಮಕಹಾನಿ ಮಾತ್ರವಲ್ಲ. ಭಯಹುಟ್ಟಿಸೋ ಹಾರರ್ ಅಂಶಗಳೂ ಈ ಸಿನಿಮಾದಲ್ಲಿದೆ ಇದೆ ಎಂಬುದನ್ನು ಟೀಸರ್‌ನಲ್ಲಿ ತೋರಿಸಿದೆ ಚಿತ್ರತಂಡ.