IPL Retention | ರೋಹಿತ್‌, ಪಾಂಡ್ಯಗಿಂತಲೂ ಬುಮ್ರಾ ದುಬಾರಿ – ಮುಂಬೈನಲ್ಲಿ ವಿದೇಶಿ ಆಟಗಾರರಿಗೆ ಕೊಕ್‌

ಮುಂಬೈ: ಭಾರೀ ಕುತೂಹಲ ಮೂಡಿಸಿದ್ದ ಐಪಿಎಲ್‌ ರೀಟೆನ್‌ (IPL Retention) ಆಟಗಾರರ ಪಟ್ಟಿ ಕೊನೆಗೂ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್‌ (Mumbai Indians) ನೀರಿಕ್ಷೆಯಂತೆ ಐವರು ಸ್ಟಾರ್‌ ಆಟಗಾರರನ್ನ ತನ್ನಲ್ಲೇ ಉಳಿಸಿಕೊಂಡಿದೆ.

ರೀಟೆನ್‌ ಪಟ್ಟಿ ಬಿಡುಗಡೆಗೊಳಿಸಿರುವ ಮುಂಬೈ ಸ್ಟಾರ್‌ ಆಟಗಾರರಾದ ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಹಾಗೂ ತಿಲಕ್‌ ವರ್ಮಾ ಅವರನ್ನ ರೀಟೆನ್‌ ಮಾಡಿಕೊಂಡಿದೆ. ಆದ್ರೆ ಮಾಜಿ ನಾಯಕ ರೋಹಿತ್‌ ಶರ್ಮಾ, ಹಾಲಿ ನಾಯಕ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಅವರಿಗಿಂತಲೂ ವೇಗಿ ಜಸ್ಪ್ರೀತ್‌ ಬುಮ್ರಾರನ್ನ ತಂಡದಲ್ಲಿ ಉಳಿಸಿಕೊಂಡಿರುವುದು ವಿಶೇಷ. ಅಲ್ಲದೇ ಪ್ರತಿ ಫ್ರಾಂಚೈಸಿಗೆ 2 ಅನ್‌ಕ್ಯಾಪ್ಡ್‌ ಪ್ಲೇಯರ್‌ ಹಾಗೂ 5 ವಿದೇಶಿ ಆಟಗಾರರಿಗೆ ಅವಕಾಶವಿದ್ದರೂ ಮುಂಬೈ ದೇಶಿ ಆಟಗಾರರಿಗೆ ಮಣೆ ಹಾಕಿದೆ.

ಯಾರಿಗೆ ಎಷ್ಟು ಮೊತ್ತ?
* ಜಸ್ಪ್ರೀತ್‌ ಬುಮ್ರಾ – 18 ಕೋಟಿ ರೂ.
* ಸೂರ್ಯಕುಮಾರ್‌ ಯಾದವ್‌ – 16.35 ಕೋಟಿ ರೂ.
* ಹಾರ್ದಿಕ್‌ ಪಾಂಡ್ಯ – 16.35 ಕೋಟಿ ರೂ.
* ರೋಹಿತ್‌ ಶರ್ಮಾ – 16.30 ಕೋಟಿ ರೂ.
* ತಿಲಕ್‌ ವರ್ಮಾ – 8 ಕೋಟಿ ರೂ.

ಮುಂದಿನ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ.