ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಶಮನ- ಕೊನೆಗೂ ನಾಮಪತ್ರ ವಾಪಸ್ ಪಡೆದ ಅಜ್ಜಂಪೀರ್ ಖಾದ್ರಿ

ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Shiggaon By Election) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇವತ್ತು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ (Ajjappir Khadri) ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿಯಿಂದ (Hubballi) ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಆಗಮಿಸಿ ಖಾದ್ರಿ, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಖಾದ್ರಿ ಸೂಕ್ತವಾದ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

ಜಮೀರ್ ಜೊತೆಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ವಾಪಸ್ ಪಡೆದುಕೊಂಡು ಕಾಂಗ್ರೆಸ್ ಪಕ್ಷದ ಯಾಸಿರ್‌ಖಾನ್ ಪಠಾಣ್‌ಗೆ ಬೆಂಬಲ ಸೂಚಿಸಿದರು. ನನಗೆ ಟಿಕೆಟ್ ಸಿಗಬೇಕಿತ್ತು, ಆದರೆ ಸಿಕ್ಕಿಲ್ಲ. ಸಿದ್ದರಾಮಯ್ಯ (Siddaramaiah), ಡಿಕೆಶಿ ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದ್ದು, ಸಿಎಂಗೆ ಬೆಂಬಲ ಸೂಚಿಸಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

ಕೊನೆಗೆ ಸಚಿವ ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಖಾನ್ ಮತ್ತು ಯಾಸಿರ್ ಖಾನ್ ಪಠಾಣ್ ಖಾದ್ರಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು, ಚುನಾವಣಾ ಪ್ರಚಾರಕ್ಕೆ ತೆರಳಿದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ
ಬಂಡಾಯ ಶಮನದ ನಂತರ ಅಜ್ಜಂಪೀರ್ ಖಾದ್ರಿ ಮಾತನಾಡಿ, ಕಾಂಗ್ರೆಸ್ (Congress) ಪಕ್ಷದ ಪ್ರಮುಖ ಮುಖಂಡರು ಮಾತನಾಡಿದ್ದಾರೆ. ಪಕ್ಷ ಮುಖ್ಯ, ಅಲ್ಲಿ ಕಾಂಗ್ರೆಸ್ ಗೆಲ್ಲವುದು ಮುಖ್ಯ. ಬಿಜೆಪಿ (BJP) ಸೋಲಿಸೋದು ಮುಖ್ಯ. ಪಠಾಣ್ ಗೆಲ್ಲಿಸಲು ಮಾತುಕೊಟ್ಟು ಬಂದಿದ್ದೇನೆ. ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಭಿನ್ನಾಭಿಪ್ರಾಯ ಏನಿದ್ದರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ನಮ್ಮ ಮನೆಯಲ್ಲಿ ಕೆಲವು ಭಿನ್ನಾಭಿಪ್ರಾಯ ಇದ್ದವು. ಅವರಿಗೆ ಟಿಕೆಟ್ ತಪ್ಪಿಸಬೇಕು ಅಂತಾ ರೌಡಿಶೀಟರ್ ಎಂದು ಹೇಳಿದ್ದು ನಿಜ. ನನಗೆ ಟಿಕೆಟ್ ಸಿಗಬೇಕು ಅಂತಾ ಹಾಗೆ ಹೇಳಿದ್ದೆ, ನನ್ನ ಸಂಸ್ಕೃತಿ ಅದಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್