ವಿಡಿಯೋ: ಹಂಪಿಯ ಹೊಂಡದಲ್ಲಿ ವಾನರ ಸೇನೆಯ ನೀರಾಟ ನೋಡಿ

ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದನೇ ಕಳೆದಂತೆ ಬೇಸಿಗೆಯ ಬಿಸಿ ಹೆಚ್ಚಾಗುತ್ತಿದೆ. ಸಾಮನ್ಯ ಜನರು ಬೇಸಿಗೆಯ ದಾಹಕ್ಕೆ ತಂಪು ಪಾನೀಯಗಳಿಗೆ ಮೊರೆ ಹೋದ್ರೆ, ಮಂಗಗಳು ಹೊಂಡದಲ್ಲಿ ನೀರಿನ ನೀರಾಟಕ್ಕೆ ಮುಂದಾಗಿವೆ.

ವಿಶ್ವ ವಿಖ್ಯಾತ ಹಂಪಿಯ ಹೇಮಕೂಟದ ಬಳಿಯ ಹೊಂಡದಲ್ಲಿ ಹತ್ತಾರು ಕೋತಿಗಳು ನೀರಿನಲ್ಲಿ ಚೆಲ್ಲಾಟವಾಡಿದ್ದು ನಿಜಕ್ಕೂ ಎಲ್ಲರ ಕಣ್ಮನ ಸೆಳೆಯುವಂತಿತ್ತು. ಬೇಸಿಗೆ ಬಿಸಿಯನ್ನು ತಣಿಸಲು ಕೋತಿಗಳು ನೀರಿನಲ್ಲಿ ಚೆಲ್ಲಾಟವಾಡಿದ ಅಪರೂಪದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಕೆಲ ಕೋತಿಗಳು ನೀರಿನಲ್ಲಿ ಜಿಗಿದು ಚೆಲ್ಲಾಟವಾಡಿದ್ರೆ ಮತ್ತೊಷ್ಟು ಕೋತಿಗಳು ಉಳಿದ ಕೋತಿಗಳನ್ನು ನೀರಿನಲ್ಲಿ ತಳ್ಳಿ ಆಟವಾಡುತ್ತಿದ್ದ ದೃಶ್ಯಗಳು ಇಲ್ಲಿವೆ ನೋಡಿ.

https://www.youtube.com/watch?v=nx77NQzRCyA

Comments

Leave a Reply

Your email address will not be published. Required fields are marked *