ಪದೇ ಪದೇ ನಿಯಮ ಉಲ್ಲಂಘನೆ – ಕಾರು ಚಾಲಕನಿಗೆ ಮೂರು ಮೀಟರ್ ಉದ್ದದ ರಶೀದಿ!

ಶಿವಮೊಗ್ಗ: ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಕಾರು (Car) ಚಾಲಕನಿಗೆ ಶಿವಮೊಗ್ಗದ (Shivamogga) ಪಶ್ಚಿಮ ಸಂಚಾರ ಪೊಲೀಸರು (Traffic Police) ಮೂರು ಮೀಟರ್‌ ಉದ್ದದ ಬಿಲ್‌ ನೀಡಿದ್ದಾರೆ. ಬಳಿಕ 11,000 ರೂ, ದಂಡ ಕಟ್ಟಿಸಿಕೊಂಡಿದ್ದಾರೆ.

ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಸಂಚಾರ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ‌ ಕಾರು ಚಾಲಕ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಚಾಲಕನಿಗೆ ಅತಿ ದೊಡ್ಡ ಬಿಲ್‌ ನೀಡಲಾಗಿದೆ.

ಚಾಲಕನಿಂದ ದಂಡವನ್ನು ಕಟ್ಟಿಸಿಕೊಂಡು ಬಳಿಕ ಆತನನ್ನು ಕಳಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.