ಬೆಂಗಳೂರು| ಕರ್ತವ್ಯ ನಿರತ ASI ಹೃದಯಾಘಾತದಿಂದ ಸಾವು

ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಕಾಮಾಕ್ಷಿಪಾಳ್ಯ (Kamakshipalya) ಠಾಣೆಯ ಎಎಸ್‌ಐ ಶಿವಶಂಕರ್ ಚಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು (ಗುರುವಾರ) ಬೆಳಗ್ಗೆ ಎಂದಿನಂತೆ ಶಿವಶಂಕರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ರೌಂಡ್ಸ್‌ಗೆಂದು ತೆರಳುವ ಸಂದರ್ಭ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.‌ ಇದನ್ನೂ ಓದಿ: ತುಮಕೂರು ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ: ಪರಮೇಶ್ವರ್ ಭರವಸೆ

ತಕ್ಷಣವೇ ಶಿವಶಂಕರ್ ಚಾರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೃದಯಾಘಾತದಿಂದ ಶಿವಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಶಂಕರ್ ಚಾರಿ 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕಳೆದ ಒಂದೂವರೆ ವರ್ಷದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು