ಕುಸಿಯಲಿದೆಯೇ 24 ಕೋಟಿ ಸರದಾರನ ಮೌಲ್ಯ – 18 ಕೋಟಿ ಪಡೆಯಲು ಪಾಂಡ್ಯ ಅರ್ಹರೇ?

ಮುಂಬೈ: ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗುವುದಕ್ಕೂ ಮುನ್ನವೇ ತೀವ್ರ ಕುತೂಹಲ ಕೆರಳಿಸಿದೆ. ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ 10 ಫ್ರಾಂಚೈಸಿಗಳು ಅಕ್ಟೋಬರ್‌ 31ರ ಒಳಗೆ ಪಟ್ಟಿ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ.

2025ರ ಐಪಿಎಲ್‌ ಆವೃತ್ತಿ ದಿಗ್ಗಜ ಆಟಗಾರರ ಪಾಲಿಗೆ ಸವಾಲಿದ್ದಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ ತಂದಿರುವ ಬಿಸಿಸಿಐ 5 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಹಾಗೂ 1 ಆರ್‌ಟಿಎಂ ಕಾರ್ಡ್‌ (RTM Card) ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ ಇಬ್ಬರು ಆಟಗಾರರ ( ಮೊದಲು ಮತ್ತು 4ನೇ ರಿಟೇನ್‌ ಆಟಗಾರ) ತಲಾ 18 ಕೋಟಿ ರೂ. ಪಡೆಯಲಿದ್ದಾರೆ. 2 ಮತ್ತು 5ನೇ ಆಟಗಾರ ತಲಾ 14 ಕೋಟಿ ರೂ. ಹಾಗೂ 3ನೇ ರಿಟೇನ್‌ ಆಟಗಾರ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಈ ಹಿನ್ನೆಲೆಯಲ್ಲಿ ಹಾಲಿ ನಾಯಕನಾಗಿರುವ ಹಾರ್ದಿಕ್‌ ಪಾಂಡ್ಯರನ್ನ ಮುಂಬೈ ಫ್ರಾಂಚೈಸಿ ಮೊದಲ ರಿಟೇನ್‌ ಮಾಡಿಕೊಂಡರೆ, ಸದ್ಯ 15 ಕೋಟಿಗೆ ಖರೀದಿಯಾಗಿರುವ ಪಾಂಡ್ಯರ ಮೌಲ್ಯ 18 ಕೋಟಿ ರೂ. ಏರಿಕೆಯಾಗಲಿದೆ. ಈ ದುಬಾರಿ ಬೆಲೆಗೆ ಪಾಂಡ್ಯ ಅರ್ಹರೇ ಎಂಬ ಪ್ರಶ್ನೆಯೂ ಎದ್ದಿದೆ? ಏಕೆಂದರೆ 2024ರ ಆವೃತ್ತಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಪಾಂಡ್ಯ 14 ಪಂದ್ಯಗಳಿಂದ 216 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಅಲ್ಲದೇ ಲೀಗ್‌ ಸುತ್ತಿನಲ್ಲೇ ಮುಂಬೈ ಇಂಡಿಯನ್ಸ್‌ ಹೊರಬಿದ್ದಿತ್ತು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

ಅಲ್ಲದೇ ಒಂದು ಕಡೆ ರೋಹಿತ್‌ ಶರ್ಮಾ ಆರ್‌ಸಿಬಿ ಪಾಲಾಗುತ್ತಾರೆ ಎಂಬ ವದಂತಿ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ರೋಹಿತ್‌ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರಂತಹ ಸೂಪರ್‌ ಸ್ಟಾರ್‌ಗಳೊಂದಿಗೆ ಮುಂಬೈ ತಂಡ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಬಾರಿ ಪಾಂಡ್ಯ ಮೊದಲ ರಿಟೇನರ್‌ ಆದ್ರೆ 18 ಕೋಟಿ ಸಂಭಾವನೆ ಪಡೆಯುತ್ತಾರಾ? ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ICC Test Ranking | ಅಶ್ವಿನ್‌ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್‌

ಸ್ಟಾರ್ಕ್‌ಗೆ ನಿರಾಸೆ?
ಇನ್ನೂ 2024ರ ಐಪಿಎಲ್‌ ಟೂರ್ನಿಗೆ ನಡೆದ ಮಿನಿ ಹರಾಜಿನಲ್ಲಿ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿ ದಾಖಲೆ ಬರೆದಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್‌ ಸ್ಟಾರ್ಕ್‌ಗೆ ಈ ಬಾರಿ ನಿರಾಸೆ ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ 5 ರಿಟೇನ್‌ ಆಟಗಾರರಿಗೆ ಸಂಭಾವನೆ ನಿಗದಿ ಮಾಡಿರುವುದರಿಂದ ಸ್ಟಾರ್ಕ್‌ರನ್ನ ಕೆಕೆರ್‌ ರಿಟೇನ್‌ ಮಾಡಿಕೊಂಡರೆ, 18 ಕೋಟಿ ರೂ.ಗೆ ಸಂಭಾವನೆ ಕುಸಿಯಲಿದೆ ಎಂದು ಮೂಲಗಳು ತಿಳಿಸಿವೆ. ರಿಟೇನ್‌ ಪಟ್ಟಿ ಬಿಡುಗಡೆಗೊಂಡ ನಂತ್ರ ಮುಂದಿನ ಬೆಳವಣಿಗೆ ತಿಳಿಯಲಿದೆ. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ